ಸೋಮವಾರ, ಜನವರಿ 18, 2021
19 °C

ಲಕ್ಷ್ಮಿ ವಿಲಾಸ್ ಬ್ಯಾಂಕ್‌ ವಿರುದ್ಧ ಆರ್‌ಬಿಐ ಕ್ರಮ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ), ಖಾಸಗಿ ವಲಯದ ಲಕ್ಷ್ಮಿ ವಿಲಾಸ್ ಬ್ಯಾಂಕ್‌ಗೆ ಕಠಿಣ ಸ್ವರೂಪದ ಆರ್ಥಿಕ ನಿರ್ಬಂಧ (ಪಿಸಿಎ) ವಿಧಿಸಿದೆ.

ವಸೂಲಾಗದ ಸಾಲದ ಗರಿಷ್ಠ ಮಟ್ಟದಲ್ಲಿದೆ. ಆರ್ಥಿಕ ನಷ್ಟ ಬಗೆಹರಿಸಲು ಅಗತ್ಯವಾದ ಬಂಡವಾಳ ನಿರ್ವಹಣೆ ಮಾಡದೇ ಇರುವುದು ಮತ್ತು ಸತತ ಎರಡು ವರ್ಷಗಳವರೆಗೆ ಸಂಪತ್ತಿನಿಂದ ಬರುತ್ತಿರುವ ಗಳಿಕೆಯೂ ನಕಾರಾತ್ಮಕವಾಗಿರುವುದನ್ನು ಗಮನದಲ್ಲಿ ಇಟ್ಟುಕೊಂಡು ಆರ್‌ಬಿಐ ಈ ಕ್ರಮ ಜರುಗಿಸಿದೆ. ಇದರಿಂದ ಹೊಸ ಶಾಖೆ ತೆರೆಯುವಂತಿಲ್ಲ. ಲಾಭಾಂಶ ನೀಡುವಂತಿಲ್ಲ ಹಾಗೂ ಕಾರ್ಪೊರೇಟ್‌ ವಲಯಕ್ಕೆ ನೀಡುವ ಸಾಲದ ಪ್ರಮಾಣದಲ್ಲಿ ಇಳಿಕೆ ಮಾಡುವುದು ಕಡ್ಡಾಯವಾಗಿದೆ.

ಬ್ಯಾಂಕ್‌ನ ಕಾರ್ಯಕ್ಷಮತೆ ಸುಧಾರಿಸುವ ದೃಷ್ಟಿಯಿಂದ ಪಿಸಿಎ ವಿಧಿಸಲಾಗಿದೆ. ಇದರಿಂದ ದೈನಂದಿನ ಕೆಲಸಗಳಿಗೆ ಯಾವುದೇ ರೀತಿಯ ಅಡ್ಡಿ ಆಗುವುದಿಲ್ಲ ಎಂದು ಬ್ಯಾಂಕ್‌ ತಿಳಿಸಿದೆ.

ಇಂಡಿಯಾಬುಲ್ಸ್‌ ಹೌಸಿಂಗ್‌ ಫೈನಾನ್ಸ್‌ ಅನ್ನು ವಿಲೀನಗೊಳಿಸಿಕೊಳ್ಳುವ ಬ್ಯಾಂಕ್‌ನ ಉದ್ದೇಶಕ್ಕೆ ಇದು ಅಡ್ಡಿಯಾಗುವ ಸಾಧ್ಯತೆ ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು