ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Repo Rate| ರೆಪೊ ದರ ಯಥಾಸ್ಥಿತಿ: ಸತತ ಏರಿಕೆಗೆ ವಿರಾಮ

Last Updated 6 ಏಪ್ರಿಲ್ 2023, 5:34 IST
ಅಕ್ಷರ ಗಾತ್ರ

ನವದೆಹಲಿ: ರೆಪೊ ದರದಲ್ಲಿನ ಸತತ ಏರಿಕೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಗುರುವಾರ ವಿರಾಮ ನೀಡಿದೆ. ಹೀಗಾಗಿ, ಶೇಕಡ 6.5ರಲ್ಲೇ ರೆಪೊ ದರ ಸ್ಥಿರವಾಗಿದೆ.

ಮೇ 2022 ರಿಂದ ಈಚೆಗೆ ಆರ್‌ಬಿಐ ರೆಪೊ ದರದಲ್ಲಿ 250 ಮೂಲಾಂಶಗಳನ್ನು ಹೆಚ್ಚಳ ಮಾಡಿದೆ.

ದ್ವೈಮಾಸಿಕ ಹಣಕಾಸು ನೀತಿಯನ್ನು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಗುರುವಾರ ಪ್ರಕಟಿಸಿದರು.
ಹಣಕಾಸು ನೀತಿ ಸಮಿತಿಯು (ಎಂಪಿಸಿ) ಭವಿಷ್ಯದಲ್ಲಿ ಯಾವುದೇ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ದಾಸ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT