ನವದೆಹಲಿ: ಹಣದುಬ್ಬರದಲ್ಲಿನ ತೀವ್ರ ಕುಸಿತ ಮತ್ತು ಬಲವಾದ ಜಿಡಿಪಿಯ ಆವೇಗದಿಂದಾಗಿ, ಮುಂಬರುವ ಡಿಸೆಂಬರ್ ಹಣಕಾಸು ನೀತಿ ಸಭೆಯಲ್ಲಿ ಆರ್ಬಿಐ 25 ಮೂಲಾಂಶಗಳಷ್ಟು ರೆಪೊ ದರ ಕಡಿತವನ್ನು ಘೋಷಿಸಬಹುದು ಎಂದು ಕ್ರೆಡಿಟ್ ರೇಟಿಂಗ್ ಏಜೆನ್ಸಿ ಕೇರ್ಎಡ್ಜ್ ಮಂಗಳವಾರ ವರದಿ ಮಾಡಿದೆ.

ಅಕ್ಟೋಬರ್ನಲ್ಲಿ ಹಣದುಬ್ಬರವು ಶೇ 0.3ಕ್ಕೆ ಇಳಿದಿದೆ. ಇದು ಆರ್ಬಿಐನ ಶೇ 4ರ ಗುರಿ ಮಿತಿಗಿಂತ ಬಹಳ ಕಡಿಮೆಯಾಗಿದೆ. ಇದು ರೆಪೊ ದರ ಕಡಿತಕ್ಕೆ ನೀತಿ ಅವಕಾಶವನ್ನು ಸೃಷ್ಟಿಸಿದೆ ಎಂದು ಅದು ಹೇಳಿದೆ. ಪ್ರಸ್ತುತ ರೆಪೊ ದರ ಶೇ 5.5 ರಷ್ಟಿದೆ.

2025-26ರ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ಶೇ 8.2ಕ್ಕೆ ಏರಿದ್ದರೂ, ದ್ವಿತೀಯಾರ್ಧದಲ್ಲಿ ಸುಮಾರು ಶೇ 7 ರಷ್ಟು ಮಧ್ಯಮ ಹಂತಕ್ಕೆ ಇಳಿಯಲಿದೆ ಎಂದು ಕೇರ್ಎಡ್ಜ್ ಅಂದಾಜಿಸಿದೆ,

ಒಂದೊಮ್ಮೆ, ವರದಿಯಂತೆ ರೆಪೊ ದರ ಇಳಿಕೆಯಾದರೆ, ಸಾಲಗಳ ಮೇಲಿನ ಬಡ್ಡಿ ದರ ಇಳಿಕೆಯಾಗುವ ಸಾಧ್ಯತೆ ಇದೆ.

ಅಮೆರಿಕದೊಂದಿಗಿನ ದೀರ್ಘಕಾಲದ ವ್ಯಾಪಾರ ಮಾತುಕತೆಗಳು ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಸೇರಿದಂತೆ ಬಾಹ್ಯ ಅಡೆತಡೆಗಳ ಹೊರತಾಗಿಯೂ, ನವೆಂಬರ್ ಮಧ್ಯದ ವೇಳೆಗೆ ವಿದೇಶಿ ವಿನಿಮಯ ಮೀಸಲು 27 ಬಿಲಿಯನ್ ಡಾಲರ್ನಿಂದ 693 ಬಿಲಿಯನ್ ಡಾಲರ್ಗೆ ಏರಿಕೆಯಾಗಿದ್ದು, ಭಾರತದ ಬಾಹ್ಯ ವಲಯವು ಸ್ಥಿತಿಸ್ಥಾಪಕತ್ವವನ್ನು ಹೊಂದಿದೆ ಎಂದು ಅದು ಹೇಳಿದೆ.

ಕೇರ್ಎಡ್ಜ್ ಪ್ರಕಾರ, ಡಿಸೆಂಬರ್ ತಿಂಗಳ ನೀತಿ ಸಭೆಯಲ್ಲಿ ಆರ್ಬಿಐ ತನ್ನ 2026ರ ಹಣದುಬ್ಬರ ಅಂದಾಜನ್ನು ಶೇ 2.1ಕ್ಕೆ ಮತ್ತು ಬೆಳವಣಿಗೆಯ ದರದ ಅಂದಾಜನ್ನು ಶೇ 7.5 ಕ್ಕೆ ಪರಿಷ್ಕರಿಸುವ ನಿರೀಕ್ಷೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.