ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಬಾಂಡ್ ಖರೀದಿಸಲು ಸಣ್ಣ ಹೂಡಿಕೆದಾರರಿಗೆ ಅವಕಾಶ

Last Updated 5 ಫೆಬ್ರುವರಿ 2021, 15:37 IST
ಅಕ್ಷರ ಗಾತ್ರ

ಮುಂಬೈ: ಸಣ್ಣ ಹೂಡಿಕೆದಾರರು ಸರ್ಕಾರಿ ಸಾಲಪತ್ರಗಳನ್ನು ನೇರವಾಗಿ ಖರೀದಿಸಲು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಅವಕಾಶ ಕಲ್ಪಿಸಲಿದೆ. ಈ ಹೂಡಿಕೆದಾರರು ಸರ್ಕಾರಿ ಸಾಲಪತ್ರಗಳ ಮಾರುಕಟ್ಟೆಯಲ್ಲಿ ನೇರವಾಗಿ ಹೂಡಿಕೆ ಮಾಡುವುದನ್ನು ಪ್ರೋತ್ಸಾಹಿಸುವ ಉದ್ದೇಶ ಈ ಕ್ರಮದ ಹಿಂದೆ ಇದೆ.

ಇಂತಹ ಅವಕಾಶವು ಜಾಗತಿಕ ಮಟ್ಟದಲ್ಲಿ ಕೆಲವು ದೇಶಗಳಲ್ಲಿ ಮಾತ್ರ ಲಭ್ಯವಿದ್ದು, ಏಷ್ಯಾದಲ್ಲಿ ಈ ಸೌಲಭ್ಯ ಕಲ್ಪಿಸಿದ ಮೊದಲ ದೇಶ ಭಾರತ ಆಗಲಿದೆ.

ಮುಂಬರುವ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರವು ₹ 12 ಲಕ್ಷ ಕೋಟಿಯನ್ನು ಸಾಲವಾಗಿ ಪಡೆಯುವ ಗುರಿ ಹೊಂದಿದ್ದು, ಇದನ್ನು ನಿಭಾಯಿಸುವ ಹೊಣೆ ಆರ್‌ಬಿಐ ಮೇಲಿದೆ. ಈಗ ಆರ್‌ಬಿಐ ಸಣ್ಣ ಹೂಡಿಕೆದಾರರಿಗೆ ಸರ್ಕಾರಿ ಸಾಲಪತ್ರಗಳನ್ನು ಮುಂಬೈ ಷೇರುಪೇಟೆ (ಬಿಎಸ್‌ಇ) ಹಾಗೂ ರಾಷ್ಟ್ರೀಯ ಷೇರುಪೇಟೆಯ (ಎನ್‌ಎಸ್‌ಇ) ‘ಗೋಬಿಡ್‌’ ವೇದಿಕೆ ಮೂಲಕ ಖರೀದಿಸಲು ಅವಕಾಶ ಕಲ್ಪಿಸಿದೆ. ಆದರೆ, ಇದು ಜನಪ್ರಿಯತೆ ಪಡೆದಿಲ್ಲ ಎನ್ನಲಾಗಿದೆ.

ಸರ್ಕಾರಿ ಸಾಲಪತ್ರಗಳ ಮಾರುಕಟ್ಟೆಗೆ ಸಣ್ಣ ಹೂಡಿಕೆದಾರರು ಪ್ರವೇಶ ಪಡೆಯುವುದನ್ನು ಪ್ರೋತ್ಸಾಹಿಸಲು ಆರ್‌ಬಿಐ ಕೈಗೊಂಡಿರುವ ಎರಡನೆಯ ಪ್ರಮುಖ ಕ್ರಮ ಇದು. ಷೇರು ವಿನಿಮಯ ಕೇಂದ್ರಗಳ ಮೂಲಕ ಹೂಡಿಕೆ ಮಾಡಲು ಅವಕಾಶ ಕಲ್ಪಿಸಿದ್ದು ಮೊದಲ ಕ್ರಮವಾಗಿತ್ತು.

ಹೊಸ ಕ್ರಮದ ಅನ್ವಯ, ಸಣ್ಣ ಹೂಡಿಕೆದಾರರು ಆರ್‌ಬಿಐ ಮೂಲಕ ‘ಗಿಲ್ಟ್‌ ಸೆಕ್ಯುರಿಟೀಸ್‌ ಖಾತೆ’ ತೆರೆಯಬೇಕು. ಇದರ ಇನ್ನಷ್ಟು ವಿವರಗಳನ್ನು ಪ್ರತ್ಯೇಕವಾಗಿ ತಿಳಿಸಲಾಗುತ್ತದೆ ಎಂದು ಆರ್‌ಬಿಐ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT