ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BS VI ಗುಣಮಟ್ಟ: ಏಪ್ರಿಲ್ 1ರಿಂದ ಪೆಟ್ರೋಲ್‌ಗೆ ತೆರಬೇಕು ಹೆಚ್ಚು ಬೆಲೆ

Last Updated 29 ಫೆಬ್ರುವರಿ 2020, 5:30 IST
ಅಕ್ಷರ ಗಾತ್ರ
ADVERTISEMENT
""

ಮುಂಬೈ: ಬಿಎಸ್‌–6 ವಾಯು ಮಾಲಿನ್ಯ ಪರಿಮಾಣಕ್ಕೆ ಅನುಗುಣವಾದ ಇಂಧನ ಪೂರೈಸಲು ಸಿದ್ಧವಿರುವುದಾಗಿ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ (ಐಒಸಿ) ಶುಕ್ರವಾರ ಹೇಳಿದೆ. ಇದರೊಂದಿಗೆ ಇಂಧನ ದರವೂ ಏರಿಕೆಯಾಗಲಿದೆ.

ದೇಶದ ಅತಿ ದೊಡ್ಡ ಇಂಧನ ಪೂರೈಕೆದಾರ ಐಒಸಿ, ಬಿಎಸ್‌–6 ಗುಣಮಟ್ಟದ (ಸಲ್ಫರ್‌ ಅಂಶ ಕಡಿಮೆ ಇರುವ) ಪೆಟ್ರೋಲ್‌ ಮತ್ತು ಡೀಸೆಲ್‌ ಉತ್ಪಾದನೆಗಾಗಿ ₹17,000 ಕೋಟಿ ವೆಚ್ಚದಲ್ಲಿ ಸಂಸ್ಕರಣ ಘಟಕಗಳನ್ನು ನವೀಕರಿಸಿದೆ ಎಂದು ಕಂಪನಿ ಅಧ್ಯಕ್ಷ ಸಂಜೀವ್‌ ಸಿಂಗ್‌ ಹೇಳಿದ್ದಾರೆ.

ಏಪ್ರಿಲ್‌ 1ರಿಂದ ಬಿಎಸ್‌–6 ಇಂಧನ ಪೂರೈಕೆಯ ಜೊತೆಗೆ ತೈಲ ಬೆಲೆಯೂಏರಿಕೆಯಾಗಲಿದೆ. ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರಿಕೆ ಪ್ರಮಾಣವನ್ನು ಅವರು ಬಹಿರಂಗ ಪಡಿಸಲಿಲ್ಲ. 'ಏಪ್ರಿಲ್‌ 1ರಿಂದ ದೇಶದಾದ್ಯಂತ ಹೊಸ ಇಂಧನ ಪೂರೈಕೆಯಾಗಲಿದೆ. ತೈಲ ಬೆಲೆ ಅಲ್ಪ ಮಟ್ಟದಲ್ಲಿ ಏರಿಕೆಯಾಗಲಿದೆ. ಇಂಧನ ಕೇವಲ 10 ಪಿಪಿಎಂ (ಪಾರ್ಟ್ಸ್‌ ಪರ್‌ ಮಿಲಿಯನ್‌) ಸಲ್ಫರ್‌ ಅಂಶ ಒಳಗೊಂಡಿರಲಿದೆ. ಪ್ರಸ್ತುತ ಬಳಕೆಯಾಗುತ್ತಿರುವ ಪೆಟ್ರೋಲ್‌ ಮತ್ತು ಡೀಸೆಲ್‌ನಲ್ಲಿ 50 ಪಿಪಿಎಂ ಸಲ್ಫರ್‌ ಅಂಶವಿದೆ' ಎಂದಿದ್ದಾರೆ.

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಸಂಸ್ಕರಣ ಘಟಕಗಳ ನವೀಕರಣಕ್ಕಾಗಿ ಒಟ್ಟು ₹35,000 ಹೂಡಿಕೆ ಮಾಡಿವೆ. ಅದರಲ್ಲಿ ಐಒಸಿ ಒಂದೇ ₹17,000 ಕೋಟಿ ವ್ಯಯಿಸಿದೆ ಎಂದು ತಿಳಿಸಿದ್ದಾರೆ.

ಬಿಪಿಸಿಎಲ್‌ ₹7,000 ಕೋಟಿ ಹೂಡಿಕೆ ಮಾಡಿದ್ದರೆ, ಎಚ್‌ಪಿಸಿಎಲ್‌ ಹೂಡಿಕೆ ಪ್ರಮಾಣವನ್ನು ಬಹಿರಂಗ ಪಡಿಸಿಲ್ಲ. ಮಾರ್ಚ್‌ 1ರಿಂದ ಹೊಸ ಗುಣಮಟ್ಟದ ಇಂಧನ ಲಭ್ಯವಿರಲಿದೆ ಎಂದಿದೆ. ಐಒಸಿ ಈಗಾಗಲೇ ಬಿಎಸ್‌–6 ಇಂಧನ ಉತ್ಪಾದನೆ ಆರಂಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT