ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಯಲ್‌ ಮಿ ಎಕ್ಸ್‌, 3ಐ ಮಾರುಕಟ್ಟೆಗೆ

Last Updated 16 ಜುಲೈ 2019, 17:44 IST
ಅಕ್ಷರ ಗಾತ್ರ

ನವದೆಹಲಿ: ಸ್ಮಾರ್ಟ್‌ಫೋನ್‌ ತಯಾರಿಕೆ ಕಂಪನಿರಿಯಲ್‌ ಮಿ, ಎರಡು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ.

ಕೈಗೆಟುಕುವ ದರದಲ್ಲಿ ಗ್ರಾಹಕ ಸ್ನೇಹಿ ಉತ್ಪನ್ನ ನೀಡುವ ಅಭಿಲಾಷೆಯೊಂದಿಗೆ, ಸುಧಾರಿತ ವಿನ್ಯಾಸ ಮತ್ತು ಗುಣಮಟ್ಟದ ‘ರಿಯಲ್‌ ಮಿ 3ಐ’ ಮತ್ತು ‘ರಿಯಲ್‌ ಮಿ–ಎಕ್ಸ್‌’ ಎಂಬ ಎರಡು ವಿಶಿಷ್ಟ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಲಾಗಿದೆ.

ರಿಯಲ್‌ ಮಿ 3ಐ: ಡೈಮಂಡ್‌ ಕಟ್‌ ವಿನ್ಯಾಸ, 4230 ಎಂಎಎಚ್‌ ಸಾಮರ್ಥ್ಯದ ಬ್ಯಾಟರಿ, ಕಡಿಮೆ ಬೆಳಕಿನಲ್ಲಿಯೂ ಸ್ಪಷ್ಟವಾದ ಚಿತ್ರ ಸೆರೆ ಹಿಡಿಯಲು ನೆರವಾಗಬಲ್ಲ 13 ಎಂಪಿ ಪ್ರೈಮರಿ ಮತ್ತು 2 ಎಂಪಿ ಸೆಕೆಂಡರಿ ಕ್ಯಾಮೆರಾಗಳನ್ನು ಒಳಗೊಂಡಿದೆ.

3 ಜಿಬಿ ರ್‍ಯಾಮ್ + 32 ಜಿಬಿ ಸಂಗ್ರಹ ಸಾಮರ್ಥ್ಯ ಹಾಗೂ 4 ಜಿಬಿ ರ್‍ಯಾಮ್ + 64 ಜಿಬಿ ಸಂಗ್ರಹ ಸಾಮರ್ಥ್ಯದ ಎರಡು ಮಾದರಿಗಳಲ್ಲಿ ಲಭ್ಯವಿವೆ.

ರಿಯಲ್‌ ಮಿ–ಎಕ್ಸ್‌: ಇನ್‌ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್‌ ತಂತ್ರಜ್ಞಾನದ ಸ್ಕ್ರೀನ್‌ ಅನ್‌ಲಾಕ್‌ ಸೌಲಭ್ಯ ಒಳಗೊಂಡಿರುವ, ಪಾಪ್‌ ಅಪ್‌ ಸೌಲಭ್ಯದ 48 ಎಂಪಿ ಹಾಗೂ 5 ಎಂಪಿ ಡ್ಯುಯಲ್‌ ರೇರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿರುವುದು ರಿಯಲ್‌ ಮಿ– ಎಕ್ಸ್‌ ವಿಶೇಷ.

710 ಸ್ನ್ಯಾಪ್‌ ಡ್ರ್ಯಾಗನ್‌ ಪ್ರೊಸೆಸರ್ ಚಾಲಿತ ಹಾಗೂ 3,765 ಎಂಎಎಚ್‌ ಸಾಮರ್ಥ್ಯದಬ್ಯಾಟರಿ ಒಳಗೊಂಡಿರುವ ಎರಡು ವಿಶಿಷ್ಟ ವಿನ್ಯಾಸಗಳಲ್ಲಿನ ಈ ಸ್ಮಾರ್ಟ್‌ ಫೋನ್‌ 4 ಜಿಬಿ ರ್‍ಯಾಮ್ + 128 ಜಿಬಿ ಸಂಗ್ರಹ ಸಾಮರ್ಥ್ಯ ಹಾಗೂ 8 ಜಿಬಿ ರ್‍ಯಾಮ್ + 128 ಜಿಬಿ ಸಂಗ್ರಹ ಸಾಮರ್ಥ್ಯದ ಎರಡು ಮಾದರಿಗಳ ಸ್ಮಾರ್ಟ್‌ ಫೋನ್‌ಗಳು ಪೋಲಾರ್‌ ವೈಟ್‌ ಮತ್ತು ಸ್ಪೇಸ್‌ ಬ್ಲೂ ಬಣ್ಣದಲ್ಲಿ ಲಭ್ಯ ಇವೆ.

ಗೇಮ್‌ ಮತ್ತು ಚಲನಚಿತ್ರ ಪ್ರಿಯರಿಗಾಗಿ ವಿನೂತನವಾಗಿ ಡಾಲ್ಬಿ ಅಟ್ಮಾಸ್‌ ಸ್ಪೀಕರ್‌ ತಂತ್ರಜ್ಞಾನವನ್ನು ಈ ಫೋನ್‌ ಮೂಲಕ ಪರಿಚಯಿಸಲಾಗುತ್ತಿದೆ. ಆನ್‌ಲೈನ್‌ನಲ್ಲಿ ಫ್ಲಿಪ್‌ಕಾರ್ಟ್‌ ಮತ್ತು ರಿಯಲ್‌ ಮಿ ಡಾಟ್‌ಕಾಂ ಮೂಲಕ ಕ್ರಮವಾಗಿ ಇದೇ 18 ಮತ್ತು 24ರಿಂದ ಖರೀದಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT