ಸೋಮವಾರ, ಜೂಲೈ 6, 2020
22 °C

ವಿದ್ಯುತ್ ಮಾರುಕಟ್ಟೆಗೆ ಚಾಲನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ವಿದ್ಯುತ್‌ ವಿತರಣಾ ಕಂಪನಿ, ಕೈಗಾರಿಕೆಗಳು ವಿದ್ಯುತ್‌ ಖರೀದಿಸಬಹುದಾದ ರಾಷ್ಟ್ರೀಯ ಮಾರುಕಟ್ಟೆಗೆ ಔಪಚಾರಿಕವಾಗಿ ಚಾಲನೆ ನೀಡಲಾಗಿದೆ.

ಕೇಂದ್ರ ಇಂಧನ ರಾಜ್ಯ ಸಚಿವ (ಸ್ವತಂತ್ರ ನಿರ್ವಹಣೆ) ಆರ್‌. ಕೆ. ಸಿಂಗ್‌ ಅವರು ವಿಡಿಯೊ ಕಾನ್‌ಫೆರೆನ್ಸ್‌ ಮೂಲಕ ಮಾರುಕಟ್ಟೆ ಉದ್ಘಾಟಿಸಿದ್ದಾರೆ. ವಿತರಣೆಯಾಗುವ ಒಂದು ಗಂಟೆ ಮುಂಚೆಯೂ ವಿದ್ಯುತ್‌ ಖರೀದಿಗೆ ಇಲ್ಲಿ ಅವಕಾಶ ಇರಲಿದೆ.

ಭಾರತದ ಇಂಧನ ವಿನಿಮಯ (ಐಇಎಕ್ಸ್‌) ಮತ್ತು ಪವರ್‌ ಎಕ್ಸ್‌ಚೇಂಜ್‌ ಇಂಡಿಯಾ ಲಿಮಿಟೆಡ್‌ನಲ್ಲಿ (ಪಿಎಕ್ಸ್‌ಐಎಲ್‌) ಈ ವಿದ್ಯುತ್‌ ಮಾರುಕಟ್ಟೆ ಕಾರ್ಯನಿರ್ವಹಿಸಲಿದೆ.

‘ಇದೊಂದು ಸಂಘಟಿತ ಮಾರುಕಟ್ಟೆಯಾಗಿದೆ. ಮಾರಾಟಗಾರರು ಮತ್ತು ಖರೀದಿದಾರರು ಈ ಮಾರುಕಟ್ಟೆ ಮೂಲಕ ವ್ಯವಹರಿಸಬಹುದು. ವಿಶ್ವದ ಕೆಲವೇ ಕೆಲ ದೇಶಗಳಲ್ಲಿ ಇಂತಹ ಮಾರುಕಟ್ಟೆ ವ್ಯವಸ್ಥೆ ಇದೆ.

ಲಭ್ಯ ಇರುವ ಹೆಚ್ಚುವರಿ ವಿದ್ಯುತ್‌ನ ಸಮರ್ಪಕ ಬಳಕೆ ಇದರಿಂದ ಸಾಧ್ಯವಾಗಲಿದೆ. ಪ್ರತಿ ಅರ್ಧ ಗಂಟೆಗೊಮ್ಮೆ ಹರಾಜು ನಡೆಯಲಿದೆ. ದಿನವೊಂದರಲ್ಲಿ 48 ಹರಾಜುಗಳು ನಡೆಯಲಿವೆ. ವಿದ್ಯುತ್‌ ವಿತರಣಾ ಕಂಪನಿಗಳು ಸ್ಪರ್ಧಾತ್ಮಕ ದರಗಳಲ್ಲಿ ವಿದ್ಯುತ್‌ ಖರೀದಿಸಲು ವಿಶಾಲ ಮಾರುಕಟ್ಟೆಯ ಅವಕಾಶ ದೊರೆಯಲಿದೆ. ನವೀಕರಿಸಬಹುದಾದ ಇಂಧನದ ಗರಿಷ್ಠ ಪ್ರಮಾಣವನ್ನು ವಿದ್ಯುತ್‌ ಜಾಲಕ್ಕೆ ಸೇರ್ಪಡೆ ಮಾಡಲು ಮತ್ತು ಉತ್ಪಾದನೆಯಲ್ಲಿನ ಅಡಚಣೆಯ ಸವಾಲುಗಳನ್ನು ನಿರ್ವಹಿಸಲು ಇದರಿಂದ ಸಾಧ್ಯವಾಗಲಿದೆ. ವಿದ್ಯುತ್‌ ಸಂಗ್ರಹ, ವಿತರಣೆಯಲ್ಲಿ ದಕ್ಷತೆಯನ್ನೂ ಕಾಯ್ದುಕೊಳ್ಳಬಹುದಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.