ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಲಯನ್ಸ್ ಲಾಭ ಶೇ 46ರಷ್ಟು ಏರಿಕೆ

Last Updated 22 ಜುಲೈ 2022, 16:00 IST
ಅಕ್ಷರ ಗಾತ್ರ

ನವದೆಹಲಿ : ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಜೂನ್ ತ್ರೈಮಾಸಿಕದ ನಿವ್ವಳ ಲಾಭದ ಪ್ರಮಾಣವು ಶೇಕಡ 46ರಷ್ಟು ಹೆಚ್ಚಾಗಿದೆ. ತೈಲ ಸಂಸ್ಕರಣೆ, ದೂರಸಂಪರ್ಕ ಉದ್ದಿಮೆ ಮತ್ತು ರಿಟೇಲ್ ವಹಿವಾಟು ಉತ್ತಮವಾಗಿದ್ದು ಈ ಹೆಚ್ಚಳಕ್ಕೆ ಕಾರಣ.

ಜೂನ್ ತ್ರೈಮಾಸಿಕದಲ್ಲಿ ಕಂಪನಿಯು ₹ 17,955 ಕೋಟಿ ಲಾಭ ಗಳಿಸಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ₹ 12,273 ಕೋಟಿ ಲಾಭ ಗಳಿಸಿತ್ತು.

ದೇಶದ ಅತಿದೊಡ್ಡ ಮೊಬೈಲ್ ದೂರಸಂಪರ್ಕ ಸೇವಾ ಕಂಪನಿಯಾಗಿರುವ ರಿಲಯನ್ಸ್ ಜಿಯೊ ಇನ್ಫೊಕಾಮ್‌ನ ಜೂನ್‌ ತ್ರೈಮಾಸಿಕದ ಲಾಭದಲ್ಲಿ ಶೇ 24ರಷ್ಟು ಏರಿಕೆ ಆಗಿದ್ದು, ₹ 4,530 ಕೋಟಿಗೆ ತಲುಪಿದೆ. ಕಂಪನಿಯು ಹೊಸದಾಗಿ 97 ಲಕ್ಷ ಗ್ರಾಹಕರನ್ನು ಪಡೆದುಕೊಂಡಿದೆ. ಪ್ರತಿ ಗ್ರಾಹಕನಿಂದ ಬರುವ ಆದಾಯವು ತಿಂಗಳಿಗೆ ₹ 175.7ಕ್ಕೆ ತಲುಪಿದೆ.

ರಿಲಯನ್ಸ್‌ನ ರಿಟೇಲ್‌ ವಹಿವಾಟು ಜೂನ್ ತ್ರೈಮಾಸಿಕದಲ್ಲಿ ₹ 2,061 ಕೋಟಿಗೆ ತಲುಪಿದೆ. ಕಂಪನಿಯು ಹೊಸದಾಗಿ 792 ಮಳಿಗೆಗಳನ್ನು ಆರಂಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT