ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಲಯನ್ಸ್–ಫ್ಯೂಚರ್ ವಹಿವಾಟು: ಅವಧಿ ವಿಸ್ತರಣೆ

Last Updated 2 ಏಪ್ರಿಲ್ 2021, 8:33 IST
ಅಕ್ಷರ ಗಾತ್ರ

ನವದೆಹಲಿ: ಕಿಶೋರ್ ಬಿಯಾನಿ ನೇತೃತ್ವದ ಫ್ಯೂಚರ್ ಸಮೂಹದ ರಿಟೇಲ್‌ ಹಾಗೂ ಸಗಟು ವ್ಯಾಪಾರ ವಿಭಾಗವನ್ನು ಖರೀದಿಸಲು ರಿಲಯನ್ಸ್ ರಿಟೇಲ್ ವೆಂಚರ್ಸ್‌ ಕಂಪನಿಯು ಹೆಚ್ಚುವರಿಯಾಗಿ ಆರು ತಿಂಗಳ ಸಮಯ ನಿಗದಿ ಮಾಡಿಕೊಂಡಿದೆ. ಒಟ್ಟು ₹ 24,713 ಕೋಟಿ ಮೌಲ್ಯದ ಖರೀದಿ ವಹಿವಾಟು ಇದು.

ಹೊಸ ಕಾಲಮಿತಿಯ ಅನ್ವಯ ಖರೀದಿ ಒಪ್ಪಂದವು ಈ ವರ್ಷದ ಸೆಪ್ಟೆಂಬರ್ 30ರೊಳಗೆ ಕಾರ್ಯರೂಪಕ್ಕೆ ಬರಬೇಕಿದೆ. ರಿಲಯನ್ಸ್ ಕಂಪನಿಯು ‘ಫ್ಯೂಚರ್‌’ನ ರಿಟೇಲ್ ಮತ್ತು ಸಗಟು ವಹಿವಾಟು ಖರೀದಿಸಲು ಮಾಡಿಕೊಂಡಿರುವ ಒಪ್ಪಂದಕ್ಕೆ ಅಮೆಜಾನ್‌ ಕಂಪನಿಯ ಆಕ್ಷೇಪ ಇದೆ.

ಫ್ಯೂಚರ್–ರಿಲಯನ್ಸ್ ಒಪ್ಪಂದಕ್ಕೆ ಭಾರತೀಯ ಸ್ಪರ್ಧಾ ಆಯೋಗ, ಸೆಬಿ ಮತ್ತು ಷೇರು ಪೇಟೆಗಳ ಅನುಮೋದನೆ ದೊರೆತಿದೆ. ಇದಕ್ಕೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಮತ್ತು ಷೇರುದಾರರ ಅನುಮತಿ ದೊರೆಯಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT