ಮಂಗಳವಾರ, ಮಾರ್ಚ್ 2, 2021
18 °C

ರಿಲಯನ್ಸ್: ಪೈಸಾ ವಸೂಲ್ ಮಾರಾಟ ಮೇಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಿಲಯನ್ಸ್ ರಿಟೇಲ್ ಕಂಪನಿಯು ಜನವರಿ 23ರಿಂದ 26ರವರೆಗೆ ‘ಫುಲ್ ಪೈಸಾ ವಸೂಲ್ ಸೇಲ್’ ಮಾರಾಟ ಮೇಳವನ್ನು ಆಯೋಜಿಸುತ್ತಿದೆ. ಕಂಪನಿಯ ಇ–ಮಾರುಕಟ್ಟೆಯಾದ ಜಿಯೊಮಾರ್ಟ್‌ನಲ್ಲಿ ಈ ಮೇಳ ನಡೆಯಲಿದೆ. ಅಲ್ಲದೆ, ಸುಪರ್ ಸ್ಮಾರ್ಟ್‌ ಸ್ಟೋರ್‌ಗಳಲ್ಲಿ, ರಿಲಯನ್ಸ್ ಫ್ರೆಷ್‌ನಲ್ಲಿ, ಸ್ಮಾರ್ಟ್‌ ಪಾಯಿಂಟ್‌ಗಳಲ್ಲಿ ಕೂಡ ಇದು ನಡೆಯಲಿದೆ.

ಪ್ಯಾಕ್ ಮಾಡಲಾದ ಆಹಾರ ವಸ್ತುಗಳು, ಹಣ್ಣು ಮತ್ತು ತರಕಾರಿಗಳು ಸೇರಿದಂತೆ ದಿನಬಳಕೆಯ ಹಲವು ವಸ್ತುಗಳ ಮೇಲೆ ಭಾರಿ ರಿಯಾಯಿತಿ ಈ ಮೇಳದಲ್ಲಿ ಇರಲಿದೆ. ಜಿಯೊಮಾರ್ಟ್‌ನ ಮೂಲಕ ಖರೀದಿ ಮಾಡುವವರಿಗೆ, ವಸ್ತುಗಳನ್ನು ಉಚಿತವಾಗಿ ಅವರ ಮನೆಗೆ ತಲುಪಿಸಲಾಗುತ್ತದೆ. ಕನಿಷ್ಠ ಮೊತ್ತದ ವಸ್ತುಗಳನ್ನು ಖರೀದಿಸಬೇಕು ಎಂದು ಷರತ್ತು ಇಲ್ಲ ಎಂದು ಹೇಳಿದೆ.

ತಂಪು ಪಾನೀಯಗಳು, ಬಿಸ್ಕತ್ತುಗಳು, ಡ್ರೈಫ್ರೂಟ್ಸ್‌, ಶಾಂಪು, ಸೋಪು, ಮಸಾಲೆ ಪದಾರ್ಥಗಳ ಮೇಲೆ ಭಾರಿ ರಿಯಾಯಿತಿ ಇದೆ ಎಂದೂ ಕಂಪನಿ ತಿಳಿಸಿದೆ. ಜಿಯೊಮಾರ್ಟ್‌ನ ಸೇವೆಗಳು ದೇಶದ 200ಕ್ಕೂ ಹೆಚ್ಚಿನ ನಗರಗಳಲ್ಲಿ ಲಭ್ಯವಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು