ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಚಿಲ್ಲರೆ ವಹಿವಾಟು ನಷ್ಟ ₹ 15.5 ಲಕ್ಷ ಕೋಟಿ

Last Updated 19 ಜುಲೈ 2020, 16:50 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19 ಸಾಂಕ್ರಾಮಿಕದಿಂದಾಗಿ ದೇಶದ ಚಿಲ್ಲರೆ‌ ವ್ಯಾಪಾರವು 100 ದಿನಗಳಲ್ಲಿ ₹ 15.5 ಲಕ್ಷ ಕೋಟಿ ವಹಿವಾಟು ನಷ್ಟ ಅನುಭವಿಸಿವೆ ಎಂದು ಅಖಿಲ ಭಾರತ ವರ್ತಕರ ಒಕ್ಕೂಟ (ಸಿಎಐಟಿ) ಹೇಳಿದೆ.

ಕೆಲಸಗಾರರ ಕೊರತೆ, ಬೇಡಿಕೆ ಕಡಿಮೆಯಾಗಿರುವುದು, ನಗದು ಬಿಕ್ಕಟ್ಟಿನ ಜತೆಗೆ ಕೇಂದ್ರ ಅಥವಾ ರಾಜ್ಯ ಸರ್ಕಾರಗಳಿಂದ ಯಾವುದೇ ಬೆಂಬಲ ಇಲ್ಲದಿರುವ ಕಾರಣ ಈ ನಷ್ಟ ಉಂಟಾಗಿದೆ ಎಂದು ಅದು ತಿಳಿಸಿದೆ.

‘ದೇಶಿ ವ್ಯಾಪಾರವು ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿ ಸಾಗುತ್ತಿದ್ದು, ತಕ್ಷಣವೇ ನೆರವಾಗದಿದ್ದರೆ ಶೇಕಡ 20ರಷ್ಟು ಮಳಿಗೆಗಳು ಬಾಗಿಲು ಮುಚ್ಚಲಿವೆ’ ಎಂದು ಸಿಎಐಟಿ ಪ್ರಧಾನ ಕಾರ್ಯದರ್ಶಿ ಪ್ರವೀಣ್‌ ಖಂಡೇಲ್‌ವಾಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT