ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸಿತದ ಹಾದಿಯಲ್ಲಿ ರುಚಿ ಸೋಯಾ ಷೇರು ಬೆಲೆ

Last Updated 8 ಜುಲೈ 2020, 15:40 IST
ಅಕ್ಷರ ಗಾತ್ರ

ಬೆಂಗಳೂರು: ಖಾದ್ಯ ತೈಲ ತಯಾರಿಸುವ ಸದ್ಯಕ್ಕೆ ಬಾಬಾ ರಾಮದೇವ್ ಅವರ ಪತಂಜಲಿ ಆಯುರ್ವೇದ ಒಡೆತನದಲ್ಲಿ ಇರುವ ರುಚಿ ಸೋಯಾ ಇಂಡಸ್ಟ್ರೀಸ್‌ನ ಷೇರು ಬೆಲೆಯು ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ಕುಸಿತ ಕಾಣುತ್ತಿದೆ.

ಗ್ರೂಪ್‌ ‘ಬಿ’ಯಲ್ಲಿ ವಹಿವಾಟು ನಡೆಸುವ ಷೇರಿನ ಬೆಲೆ ಜೂನ್‌ ಅಂತ್ಯದಲ್ಲಿ ಗರಿಷ್ಠ ಮಟ್ಟವಾದ ₹ 1,535ರವರೆಗೆ ತಲುಪಿತ್ತು. ಇದರಿಂದ ಕಂಪನಿಯ ಮಾರುಕಟ್ಟೆ ಮೌಲ್ಯವು ₹ 45 ಸಾವಿರ ಕೋಟಿ ಮೊತ್ತವನ್ನೂ ದಾಟಿತ್ತು. ಜೂನ್‌ 29ರ ನಂತರ, ಷೇರಿನ ಬೆಲೆಯು ಪ್ರತಿ ದಿನ ಶೇ 5ರಷ್ಟು ಕುಸಿತ ಕಾಣುತ್ತಿದೆ. ಬುಧವಾರ ₹ 1,108.20ಕ್ಕೆ ಇಳಿದಿದೆ.

₹ 41 ಕೋಟಿ ನಷ್ಟ: ಮಾರ್ಚ್‌ ಅಂತ್ಯಕ್ಕೆ ಕೊನೆಗೊಂಡ ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಯು ₹ 41 ಕೋಟಿ ಮೊತ್ತದ ನಷ್ಟ ದಾಖಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT