ಮುಂಬೈ:ಜಾಗತಿಕ ವಾಣಿಜ್ಯ ಸಮರ ಮತ್ತು ಕಚ್ಚಾ ತೈಲ ಬೆಲೆ ಏರಿಕೆಯು ರೂಪಾಯಿ ಮೌಲ್ಯವನ್ನು ಮತ್ತೆ ಕುಸಿತದ ಹಾದಿ ಹಿಡಿಯುವಂತೆ ಮಾಡಿವೆ.
ಕರೆನ್ಸಿ ಮಾರುಕಟ್ಟೆಯಲ್ಲಿ ಮಂಗಳವಾರದ ವಹಿವಾಟಿನಲ್ಲಿ ಒಂದು ಡಾಲರ್‌ಗೆ 73ರ ಸಮೀಪಕ್ಕೆ ಕುಸಿತ ಕಂಡಿದೆ. ಎರಡು ದಿನಗಳಲ್ಲಿ ಒಟ್ಟು 114 ಪೈಸೆ (ಶೇ 1.5) ಇಳಿಕೆಯಾಗಿದೆ. ಮಂಗಳವಾರ 47 ಪೈಸೆ ಇಳಿಕೆ ಕಂಡು, ಸಾರ್ವಕಾಲಿಕ ದಾಖಲೆ ಮಟ್ಟವಾದ ₹ 72.98ರಂತೆ ವಹಿವಾಟು ಅಂತ್ಯವಾಗಿದೆ.
ಆಮದುದಾರರಿಂದ ಅಮೆರಿಕದ ಡಾಲರ್‌ಗೆ ಅತಿಯಾದ ಬೇಡಿಕೆ ಸೃಷ್ಟಿಯಾಗಿದ್ದರಿಂದ ರೂಪಾಯಿ ಮೌಲ್ಯ ಈ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ತಜ್ಞರು ಹೇಳಿದ್ದಾರೆ.
ಅಮರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾದ ಸರಕುಗಳ ಮೇಲೆ ಹೊಸದಾಗಿ ಶೇ 10ರಷ್ಟು ಆಮದು ಸುಂಕ ಘೋಷಿಸಿದ್ದಾರೆ. ಇದರಿಂದ ಡಾಲರ್ ಮೌಲ್ಯ 7 ವಾರಗಳ ಕನಿಷ್ಠ ಮಟ್ಟಕ್ಕೆ ಇಳಿಕೆ ಕಂಡಿದೆ. ಹೀಗಿದ್ದರೂ ಕಚ್ಚಾ ತೈಲ ದರ ಏರಿಕೆಯು ರೂಪಾಯಿ ಮೇಲೆ ಒತ್ತಡ ಹೆಚ್ಚಾಗುವಂತೆ ಮಾಡಿದೆ.