‘ರೂಪಾಯಿ ಮೌಲ್ಯ ಇಳಿಕೆ; ಆರ್ಥಿಕತೆಗೆ ಉತ್ತಮ’
‘ಜಾಗತಿಕ ಮಟ್ಟದ ಪ್ರಮುಖ ಕರೆನ್ಸಿಗಳ ವಿರುದ್ಧ ದೇಶದ ರೂಪಾಯಿ ಮೌಲ್ಯ ಇಳಿಕೆ ಆಗುತ್ತಿರುವುದು ಆರ್ಥಿಕತೆಗೆ ಉತ್ತಮ’ ಎಂದು ನೀತಿ ಆಯೋಗದ ಉಪಾಧ್ಯಕ್ಷ ಹಾಗೂ ಅರ್ಥಶಾಸ್ತ್ರಜ್ಞ ರಾಜೀವ್ ಕುಮಾರ್ ಹೇಳಿದ್ದಾರೆ. ರೂಪಾಯಿ ಮೌಲ್ಯ ಇಳಿಕೆ ಆಗುತ್ತಿರುವುದರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ‘ಸದೃಢವಾದ ರೂಪಾಯಿ’ ಎಂದು ಕರೆಯಲ್ಪಡುವ ರೂಪಾಯಿಯನ್ನು ಆರ್ಥಿಕ ಶಕ್ತಿಯ ಸಂಕೇತವಾಗಿ ನೋಡುವ ಸಮಯ ಬಂದಿದೆ ಎಂದು ಹೇಳಿದ್ದಾರೆ. ರೂಪಾಯಿ ಮೌಲ್ಯ ಇಳಿಕೆಯು ದೇಶದ ಕಾರ್ಮಿಕ ಕೇಂದ್ರಿತ ಸರಕುಗಳ ರಫ್ತಿಗೆ ಉತ್ತೇಜನ ನೀಡಲಿದೆ. ಇದು ವಿದೇಶಿ ವಿನಿಮಯ ಸಂಗ್ರಹವನ್ನು ಹೆಚ್ಚಿಸಲಿದೆ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ‘ಎಕ್ಸ್’ ನಲ್ಲಿ ಹೇಳಿದ್ದಾರೆ.