ಮುಂಬೈ: ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಅಮೆರಿಕನ್ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ 12 ಪೈಸೆ ಏರಿಕೆಯಾಗಿ 85.86ಕ್ಕೆ ತಲುಪಿತ್ತು. ಬಲವಾದ ಬಂಡವಾಳದ ಒಳಹರಿವು ಈ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ವರದಿ ತಿಳಿಸಿದೆ.

ಕಚ್ಚಾ ತೈಲ ಬೆಲೆಗಳಿಂದ ಹಿಡಿದು ದ್ರವ್ಯತೆ ನಿರ್ಬಂಧಗಳವರೆಗೆ ಸುಪ್ತ ಅಪಾಯಗಳು ಸ್ಥಳೀಯ ಕರೆನ್ಸಿಗೆ ಸವಾಲುಗಳನ್ನು ಒಡ್ಡುತ್ತಲೇ ಇವೆ ಎಂದು ಫಾರೆಕ್ಸ್ ವ್ಯಾಪಾರಿಗಳು ತಿಳಿಸಿದ್ದಾರೆ.

ಅಂತರಬ್ಯಾಂಕ್ ವಿದೇಶಿ ವಿನಿಮಯದಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 85.93ರಲ್ಲಿ ಪ್ರಾರಂಭವಾಯಿತು. ನಂತರ, ತುಸು ಏರಿಕೆಯಾಗಿ 85.86ಕ್ಕೆ ತಲುಪಿತ್ತು. ಶುಕ್ರವಾರದ ವಹಿವಾಟು ಮುಕ್ತಾಯಕ್ಕಿಂತ 12 ಪೈಸೆ ಏರಿಕೆಯಾಗಿತ್ತು.

ಶುಕ್ರವಾರ, ಡಾಲರ್ ಎದುರು ರೂಪಾಯಿ 38 ಪೈಸೆ ಏರಿಕೆಯಾಗಿ 85.98ಕ್ಕೆ ಮುಕ್ತಾಯವಾಗಿತ್ತು.

"ಇತ್ತೀಚಿನ ಏರಿಕೆಗಳ ಹೊರತಾಗಿಯೂ ರೂಪಾಯಿ ಬಾಹ್ಯ ಆಘಾತಗಳಿಗೆ, ವಿಶೇಷವಾಗಿ ಕಚ್ಚಾ ತೈಲ ಬೆಲೆ ಏರಿಳಿತಗಳಿಗೆ ಗುರಿಯಾಗುತ್ತದೆ. ಮಧ್ಯಪ್ರಾಚ್ಯದಲ್ಲಿ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಹೆಚ್ಚಾದಂತೆ ಬ್ರೆಂಟ್ ಕಚ್ಚಾ ತೈಲ ಬ್ಯಾರೆಲ್ಗೆ 72 ಡಾಲರ್ಗೆ ಏರಿಕೆ ಕಂಡಿದೆ’ ಎಂದು ಸಿಆರ್ ಫಾರೆಕ್ಸ್ ಅಡ್ವೈಸರ್ಸ್ ಎಂಡಿ ಅಮಿತ್ ಪಬಾರಿ ಹೇಳಿದ್ದಾರೆ.

ಈ ಮಧ್ಯೆ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು(ಎಫ್ಐಐ) ಶುಕ್ರವಾರ ₹7,470 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ವಿನಿಮಯ ದತ್ತಾಂಶಗಳು ತಿಳಿಸಿವೆ.

ಹೆಚ್ಚುವರಿಯಾಗಿ, ಬ್ಯಾಂಕ್ಯೇತರ ಹಣಕಾಸು ಕಂಪನಿಗಳು(ಎನ್ಬಿಎಫ್ಸಿ) ₹16,400 ಕೋಟಿ ಮೌಲ್ಯದ ಬಾಂಡ್ಗಳನ್ನು ಬಿಡುಗಡೆ ಮಾಡಿ, ದ್ರವ್ಯತೆಯನ್ನು ಹೆಚ್ಚಿಸಿ ಹೂಡಿಕೆದಾರರ ವಿಶ್ವಾಸವನ್ನು ಬಲಪಡಿಸಿವೆ. ಇದು ರೂಪಾಯಿಗೆ ಬಲವನ್ನು ನೀಡುತ್ತದೆ’ಎಂದು ಪಬಾರಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.