ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರೂಪಾಯಿ ಮೌಲ್ಯ 14 ಪೈಸೆ ಇಳಿಕೆ

Published 26 ಜೂನ್ 2024, 15:30 IST
Last Updated 26 ಜೂನ್ 2024, 15:30 IST
ಅಕ್ಷರ ಗಾತ್ರ

ಮುಂಬೈ: ಅಮೆರಿಕದ ಡಾಲರ್‌ ಎದುರು ಬುಧವಾರ ರೂಪಾಯಿ ಮೌಲ್ಯವು 14 ಪೈಸೆಯಷ್ಟು ಕುಸಿದಿದೆ. ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ವಹಿವಾಟಿನ ಅಂತ್ಯಕ್ಕೆ ₹83.57ಕ್ಕೆ ತಲುಪಿದೆ.

ಡಾಲರ್‌ ಮೌಲ್ಯದಲ್ಲಿ ಏರಿಕೆ ಮತ್ತು ಕಚ್ಚಾ ತೈಲದ ಬೆಲೆ ಏರಿಕೆಯಿಂದಾಗಿ ರೂಪಾಯಿ ಒತ್ತಡಕ್ಕೆ ಸಿಲುಕಿದೆ.

‘ದೇಶೀಯ ಮಾರುಕಟ್ಟೆಯಲ್ಲಿನ ಸಕಾರಾತ್ಮಕ ವಹಿವಾಟು, ವಿದೇಶಿ ಸಾಂಸ್ಥಿಕ ಹೂಡಿಕೆಯ ಒಳಹರಿವು ಹೆಚ್ಚಳವು ರೂಪಾಯಿ ಮೌಲ್ಯದ ವೃದ್ಧಿಗೆ ಸಹಕಾರಿಯಾಗಲಿದೆ’ ಎಂದು ಬಿಎನ್‌ಪಿ ಪರಿಬಾಸ್‌ನ ಅನುಜ್‌ ಚೌಧರಿ ಹೇಳಿದ್ದಾರೆ.

ಮಂಗಳವಾರದ ವಹಿವಾಟಿನಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯವು 4 ಪೈಸೆ ಏರಿಕೆಯಾಗಿ ₹83.43ಕ್ಕೆ ತಲುಪಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT