ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆರ್‌ವಿಎನ್‌ಎಲ್‌: ₹65 ಸಾವಿರ ಕೋಟಿಗೇರಿದ ಯೋಜನೆ ಮೊತ್ತ

Published 18 ಫೆಬ್ರುವರಿ 2024, 15:30 IST
Last Updated 18 ಫೆಬ್ರುವರಿ 2024, 15:30 IST
ಅಕ್ಷರ ಗಾತ್ರ

ನವದೆಹಲಿ: ಸಾರ್ವಜನಿಕ ವಲಯದ ರೈಲ್‌ ವಿಕಾಸ್‌ ನಿಗಮ ಲಿಮಿಟೆಡ್‌ನ (ಆರ್‌ವಿಎನ್‌ಎಲ್‌) ಯೋಜನೆಗಳ ಮೊತ್ತ ₹65 ಸಾವಿರ ಕೋಟಿಗೆ ಮುಟ್ಟಿದೆ. ಇದರಲ್ಲಿ ಶೇ 50ರಷ್ಟು ರೈಲ್ವೆ ಯೋಜನೆಗಳಾಗಿವೆ ಎಂದು ಕಂಪನಿ ತಿಳಿಸಿದೆ.

ಮಧ್ಯ ಏಷ್ಯಾ, ಅರಬ್‌ ಸಂಯುಕ್ತ ಸಂಸ್ಥಾನ (ಯುಎಇ), ಪಶ್ಚಿಮ ಏಷ್ಯಾ ಸೇರಿದಂತೆ ವಿದೇಶಿ ಮಾರುಕಟ್ಟೆಗಳಲ್ಲಿ ಹೊಸ ಯೋಜನೆಗಳನ್ನು ಹುಡುಕುತ್ತಿದೆ ಎಂದು ಆರ್‌ವಿಎನ್‌ಎಲ್‌ನ ಆಡಳಿತ ಮಂಡಳಿಯು ಹೂಡಿಕೆದಾರರಿಗೆ ತಿಳಿಸಿದೆ.

ಒಟ್ಟು ಯೋಜನೆಗಳಲ್ಲಿ ವಂದೇ ಭಾರತ್‌ ರೈಲಿನ ಪಾಲು ₹9 ಸಾವಿರ ಕೋಟಿ ಮತ್ತು ಹಲವು ಮೆಟ್ರೋ ಯೋಜನೆಗಳ ಮೊತ್ತವು ₹7 ಸಾವಿರ ಕೋಟಿ. ಇದಲ್ಲದೆ ಕಂಪನಿಯು, ವಿದ್ಯುದೀಕರಣ, ಪ್ರಸರಣ ಮಾರ್ಗ ಮತ್ತು ಇತರ ಯೋಜನೆಗಳನ್ನು ಸಹ ಪಡೆದುಕೊಂಡಿದೆ.

ರೈಲ್ವೆ ಸಚಿವಾಲಯದ ಅಡಿಯಲ್ಲಿ ಬರುವ ಆರ್‌ವಿಎನ್‌ಎಲ್‌, ಯೋಜನಾ ಅಭಿವೃದ್ಧಿ, ಹಣಕಾಸು ಮತ್ತು ರೈಲು ಮೂಲಸೌಕರ್ಯಕ್ಕೆ ಸಂಬಂಧಿಸಿದ ಯೋಜನೆಗಳ ಅನುಷ್ಠಾನದಲ್ಲಿ ತೊಡಗಿಸಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT