ಎಐ ವಾಶ್, ಎಐ ಎನರ್ಜಿ, ಎಐ ಕಂಟ್ರೋಲ್ ಮತ್ತು ಎಐ ಇಕೋಬಬಲ್ ಫೀಚರ್ ಗಳನ್ನು ಹೊಂದಿರುವ ಹೊಚ್ಚ ಹೊಸ, 12 ಕೆಜಿ ಸಾಮರ್ಥ್ಯದ ಎಐ ವಾಷಿಂಗ್ ಮಷೀನ್‌ಗಳು ಬಹಳ ಕಡಿಮೆ ಶ್ರಮದಲ್ಲಿ ಕೆಲಸ ಮಾಡಿ ಮುಗಿಸುವುದರಿಂದ ಬಟ್ಟೆ ತೊಳೆಯಬೇಕು ಎಂಬ ಆಲೋಚನೆಯನ್ನೇ ತೊಡೆದು ಹಾಕುತ್ತವೆ.
12 ಕೆ.ಜಿ ಸಾಮರ್ಥ್ಯದ ವಾಷಿಂಗ್ ಮೆಷಿನ್ ಭಾರತೀಯ ಗ್ರಾಹಕರಿಗೆ ಸೂಕ್ತವಾಗಿದೆ. ಇದು ಅವರ ಎಲ್ಲಾ ಬಟ್ಟೆಗಳನ್ನು ಒಂದೇ ಬಾರಿ ತೊಳೆಯಲು ಅನುವು ಮಾಡಿಕೊಡುವುದರಿಂದ ಹೆಚ್ಚು ಅನುಕೂಲಕರವಾಗಿದೆ ಮತ್ತು ತೊಂದರೆ ಮುಕ್ತ ಅನುಭವ ಒದಗಿಸುತ್ತದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.
ಈ ವಾಷಿಂಗ್ ಮೆಷಿನ್ ಗಳು ಪರದೆಗಳು, ಹೊದಿಕೆಗಳು ಮತ್ತು ಸೀರೆಗಳಂತಹ ದೊಡ್ಡ ಗಾತ್ರದ ಬಟ್ಟೆಗಳನ್ನು ತೊಳೆಯಲು ಈ ಉತ್ಪನ್ನವು ಸೂಕ್ತವಾಗಿದೆ. ಸ್ಯಾಮ್ ಸಂಗ್ ಇಂಡಿಯಾದ ಹೊಸ 12 ಕೆಜಿ ಸಾಮರ್ಥ್ಯದ ವಾಷಿಂಗ್ ಮೆಷಿನ್ ಶ್ರೇಣಿಯ ಆರಂಭಿಕ ಬೆಲೆ ₹ 52990. ಈ ಅತ್ಯಾಧುನಿಕ ಹೊಚ್ಚ ಹೊಸ ವಾಷಿಂಗ್ ಮೆಷಿನ್‌ಗಳು ಫ್ಲಾಟ್ ಗ್ಲಾಸ್ ಡೋರ್ ಹೊಂದಿದೆ. ಬೀಸ್ಪೋಕ್ ವಿನ್ಯಾಸವನ್ನು ಹೊಂದಿವೆ. ಎಐ ವಾಶ್, ಎಐ ಎನರ್ಜಿ ಮೋಡ್, ಎಐ ಕಂಟ್ರೋಲ್ ಮತ್ತು ಎಐ ಇಕೋಬಬಲ್‌ನಂತಹ ಆಧುನಿಕ ಎಐ ಫೀಚರ್ ಗಳನ್ನು ಹೊಂದಿವೆ.