ಗುರುವಾರ , ಜೂಲೈ 2, 2020
28 °C

ಎಸ್‌ಬಿಐ: ಸ್ಥಿರ ಠೇವಣಿ ಬಡ್ಡಿ ದರ ಕಡಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ತನ್ನ ಸ್ಥಿರ ಠೇವಣಿಗಳ (ಎಫ್‌ಡಿ) ಮೇಲಿನ ಬಡ್ಡಿ ದರವನ್ನು ಶೇ 0.40ರಷ್ಟು ಇಳಿಸಿದೆ.

ಒಂದು ತಿಂಗಳಲ್ಲಿನ ಎರಡನೆ ಬಡ್ಡಿ ದರ ಕಡಿತ ಇದಾಗಿದೆ. ₹ 2 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಸಗಟು ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇ 0.50ರಷ್ಟು ಕಡಿಮೆ ಮಾಡಿದೆ. ಹೊಸ ದರಗಳು ತಕ್ಷಣದಿಂದಲೇ ಜಾರಿಗೆ ಬಂದಿವೆ ಎಂದು ಬ್ಯಾಂಕ್‌ ತನ್ನ ಅಂತರ್ಜಾಲ ತಾಣದಲ್ಲಿ ಪ್ರಕಟಿಸಿದೆ.

ಹಿರಿಯ ನಾಗರಿಕರಿಗೆ ಪರಿಷ್ಕೃತ ಬಡ್ಡಿ ದರಗಳಿಗೆ ಹೆಚ್ಚುವರಿಯಾಗಿ ಶೇ 0.50ರಷ್ಟು ಬಡ್ಡಿ ನೀಡಲಿದೆ.

7 ರಿಂದ 45 ದಿನಕ್ಕೆ ಶೇ 2.9, 46 ರಿಂದ 179 ದಿನಕ್ಕೆ ಶೇ 3.9, 180 ದಿನಗಳಿಂದ 1 ವರ್ಷಕ್ಕೆ ಶೇ 4.4, ಒಂದು ವರ್ಷದಿಂದ 3 ವರ್ಷಕ್ಕೆ ಶೇ 5.1, ಮೂರರಿಂದ 5 ವರ್ಷಕ್ಕೆ ಶೇ 5.3, ಐದರಿಂದ 10 ವರ್ಷಕ್ಕೆ ಶೇ 5.4.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು