ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಬಿಐ ಬಡ್ಡಿ ದರ ಶೇ 0.05 ಕಡಿತ

ಎಸ್‌ಬಿಐ: ಗೃಹ ಸಾಲ ಬಡ್ಡಿ ದರ ಅಗ್ಗ
Last Updated 10 ಮೇ 2019, 18:32 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಅತಿದೊಡ್ಡ ಬ್ಯಾಂಕ್‌ ಆಗಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ತನ್ನ ಠೇವಣಿಗಳ ಮೇಲಿನ
ಹೆಚ್ಚುವರಿ ವೆಚ್ಚ ಆಧರಿಸಿದ ಬಡ್ಡಿ ದರವನ್ನು (ಎಂಸಿಎಲ್‌ಆರ್‌) ಶೇ 0.05ರಷ್ಟು ತಗ್ಗಿಸಿದೆ.

ಇದರಿಂದಾಗಿ 1 ವರ್ಷದ ‘ಎಂಸಿಎಲ್‌ಆರ್‌‘ ಶೇ 8.50ರಿಂದ ಶೇ 8.45ಕ್ಕೆ ಇಳಿಯಲಿದೆ.
‘ಎಂಸಿಎಲ್‌ಆರ್‌’ಗೆ ಲಗತ್ತಾದ ಎಲ್ಲ ಬಗೆಯ ಸಾಲಗಳ ಬಡ್ಡಿ ದರವು ತಕ್ಷಣದಿಂದ (ಮೇ 10) ಶೇ 0.05ರಷ್ಟು ಕಡಿಮೆಯಾಗಲಿದೆ.

ಕಳೆದ ಒಂದು ತಿಂಗಳಿನಲ್ಲಿ ಎಸ್‌ಬಿಐ ಬಡ್ಡಿ ದರ ಕಡಿತದ ಎರಡನೆನಿರ್ಧಾರ ಇದಾಗಿದೆ.ಈ ವರ್ಷದ ಏಪ್ರಿಲ್‌ 10ರ ಕಡಿತವೂ ಸೇರಿದಂತೆ ಗೃಹ ಸಾಲಗಳ ಬಡ್ಡಿ ದರ ಶೇ 0.15ರಷ್ಟು ಕಡಿಮೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT