ಗುರುವಾರ , ಜೂಲೈ 9, 2020
25 °C

ಬುಧವಾರದಿಂದ ಶೇ 0.25ರಷ್ಟು ಎಂಸಿಎಲ್‌ಆರ್‌ ಇಳಿಕೆ: ಎಸ್‌ಬಿಐ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಬುಧವಾರದಿಂದ ಜಾರಿಗೆ ಬರುವಂತೆ ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿದ (ಎಂಸಿಎಲ್‌ಆರ್)‌ ಬಡ್ಡಿದರವನ್ನು ಶೇ 0.25ರಷ್ಟು ಇಳಿಕೆ ಮಾಡುವುದಾಗಿ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಹೇಳಿದೆ.

ಹೀಗಾಗಿ ಒಂದು ವರ್ಷದ ಎಂಸಿಎಲ್ಆರ್‌ ಶೇ 7.25 ರಿಂದ ಶೇ 7ಕ್ಕೆ ಇಳಿಕೆಯಾಗಲಿದೆ. ಇದರಿಂದ ಅರ್ಹ ಗೃಹ ಸಾಲದ ‘ಇಎಂಐ’ ಸಹ ಕಡಿಮೆಯಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. 

ಇದೇ ವೇಳೆ ಜುಲೈ 1ರಿಂದ ಅನ್ವಯಿಸುವಂತೆ ರೆಪೊ ಆಧಾರಿತ ಸಾಲಗಳ ಮೇಲಿನ ಬಡ್ಡಿದರ (ಆರ್‌ಎಲ್‌ಎಲ್‌ಆರ್‌) ಮತ್ತು ಬಾಹ್ಯ ಮಾನದಂಡ (ಇಬಿಆರ್‌) ಆಧರಿಸಿದ ಬಡ್ಡಿದರ ಶೇ 0.40ರಷ್ಟು ಕಡಿಮೆ ಮಾಡಿದೆ. ಇದರಿಂದಾಗಿ ಆರ್‌ಎಲ್‌ಎಲ್‌ಆರ್‌ ನೀಡಿಕೆ ದರ ಶೇ 6.65 ರಿಂದ ಶೇ 6.25ಕ್ಕೆ ಹಾಗೂ ಇಆರ್‌ಬಿ ನೀಡಿಕೆ ದರ ಶೇ 7.05 ರಿಂದ ಶೇ 6.65ಕ್ಕೆ ತಲುಪಲಿದೆ.

ಆರ್‌ಬಿಐ ಮೇ 22ರಂದು ರೆಪೊ ದರವನ್ನು ಶೇ 0.40ರಷ್ಟು ಕಡಿಮೆ ಮಾಡಿತ್ತು. ಇದಕ್ಕೆ ಅನುಗುಣವಾಗಿ ಎಸ್‌ಬಿಐ ಇಆರ್‌ಬಿ ಮತ್ತು ಆರ್‌ಎಲ್‌ಎಲ್‌ಆರ್‌ನಲ್ಲಿ ಕಡಿತ ಮಾಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು