ಭಾನುವಾರ, ಸೆಪ್ಟೆಂಬರ್ 25, 2022
30 °C
ಸೆನ್ಸೆಕ್ಸ್‌ 443 ಅಂಶ, ನಿಫ್ಟಿ 126 ಅಂಶ ಏರಿಕೆ

ಲೋಹ, ಬ್ಯಾಂಕಿಂಗ್ ಷೇರು ಗಳಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ದೇಶದ ಷೇರುಪೇಟೆಗಳ ವಾರದ ವಹಿವಾಟಿನ ಮೊದಲ ದಿನ ಸೂಚ್ಯಂಕಗಳು ಏರಿಕೆ ಕಂಡುಕೊಂಡವು.

ಜಾಗತಿಕ ಮಟ್ಟದಲ್ಲಿ ವಹಿವಾಟು ಇಳಿಮುಖವಾಗಿದ್ದರು ಸಹ ದೇಶದಲ್ಲಿ ಲೋಹ, ಬ್ಯಾಂಕಿಂಗ್‌ ಮತ್ತು ಬಂಡವಾಳ ಸರಕುಗಳ ವಲಯಗಳ ಷೇರುಗಳ ಮೌಲ್ಯ ಹೆಚ್ಚಾಗಿದ್ದರಿಂದ ಸೋಮವಾರ ಸಕಾರಾತ್ಮಕ ವಹಿವಾಟು ನಡೆಯಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 443 ಅಂಶ ಏರಿಕೆ ಕಂಡು 59,246 ಅಂಶಗಳಿಗೆ
ತಲುಪಿತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 126 ಅಂಶ ಏರಿಕೆ ಕಂಡು 17,665 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು.

ರಿಲಯನ್ಸ್‌ ಇಂಡಸ್ಟ್ರೀಸ್‌, ಸನ್‌ ಫಾರ್ಮಾ ಮತ್ತು ಐಟಿಸಿ ಷೇರುಗಳನ್ನು ಹೂಡಿಕೆದಾರರು ಹೆಚ್ಚಿನ ಪ್ರಮಾಣದಲ್ಲಿ ಖರೀದಿ ನಡೆಸಿದರು. ಡಾಲರ್‌ ಎದುರು ರೂಪಾಯಿ ಮೌಲ್ಯ ಏರಿಕೆಯೂ ವಹಿವಾಟಿನ ಮೇಲೆ ಪ್ರಭಾವ ಬೀರಿತು ಎಂದು ಮಾರುಕಟ್ಟೆ ವರ್ತಕರು ಹೇಳಿದ್ದಾರೆ.

‘ಷೇರುಪೇಟೆಯ ಪಾಲಿಗೆ ಇದೊಂದು ಅಚ್ಚರಿಯ ವಾರದ ವಹಿವಾಟಿನ ಆರಂಭ ಆಗಿದೆ. ಜಾಗತಿಕ ಷೇರುಪೇಟೆಗಳು ದುರ್ಬಲವಾಗಿದ್ದರೂ ಸೆನ್ಸೆಕ್ಸ್ ಮತ್ತು ನಿಫ್ಟಿ ನಿಯಂತ್ರಣ ಕಂಡುಕೊಂಡಿವೆ’ ಎಂದು ಮೆಹ್ತಾ ಈಕ್ವಿಟೀಸ್‌ ಲಿಮಿಟೆಡ್‌ನ ಹಿರಿಯ ಉಪಾಧ್ಯಕ್ಷ ಪ್ರಶಾಂತ್‌ ತಾಪ್ಸೆ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು