ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆ ವಹಿವಾಟು ಚೇತರಿಕೆ

Last Updated 7 ಅಕ್ಟೋಬರ್ 2021, 15:19 IST
ಅಕ್ಷರ ಗಾತ್ರ

ಮುಂಬೈ: ದೇಶದ ಷೇರುಪೇಟೆಗಳು ಗುರುವಾರ ಸಕಾರಾತ್ಮಕ ಹಾದಿಗೆ ಮರಳಿದವು. ಬ್ಯಾಂಕ್‌, ಗ್ರಾಹಕ ಬಳಕೆ ಮತ್ತು ವಾಹನ ವಲಯದ ಷೇರುಗಳು ಉತ್ತಮ ಖರೀದಿ ವಹಿವಾಟು ಕಂಡವು. ಟಿಸಿಎಸ್‌ ಕಂಪನಿಯು ಶುಕ್ರವಾರ ತನ್ನ ಆರ್ಥಿಕ ಫಲಿತಾಂಶ ಘೋಷಣೆ ಮಾಡಲಿರುವುದರಿಂದ ಐ.ಟಿ. ವಲಯದ ಷೇರುಗಳು ಗಳಿಕೆ ಹಾದಿಯಲ್ಲಿದ್ದವು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 488 ಅಂಶ ಏರಿಕೆಯಾಗಿ 59,677 ಅಂಶಗಳಿಗೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 144 ಅಂಶ ಹೆಚ್ಚಾಗಿ 17,790 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು.

ಕಚ್ಚಾ ತೈಲ ದರ ಇಳಿಕೆ ಮತ್ತು ಅಮೆರಿಕದ ಬಾಂಡ್‌ ಗಳಿಕೆ ಹಾಗೂ ಅಮೆರಿಕದ ಆಡಳಿತವು ಸಾಲದ ಮಿತಿಯನ್ನು ಹೆಚ್ಚಿಸುವ ನಿರ್ಧಾರಕ್ಕೆ ಮುಂದಾಗಿರುವುದು ಜಾಗತಿಕ ಷೇರುಪೇಟೆಗಳಲ್ಲಿ ಸಕಾರಾತ್ಮಕ ವಹಿವಾಟಿಗೆ ಕಾರಣವಾಯಿತು. ಇದು ದೇಶಿ ಷೇರುಪೇಟೆಗಳ ಮೇಲೆಯೂ ಪ್ರಭಾವ ಬೀರಿತು ಎಂದು ಆಶಿಕಾ ಸ್ಟಾಕ್‌ ಬ್ರೋಕಿಂಗ್‌ನ ಸಂಶೋಧನಾ ಮುಖ್ಯಸ್ಥ ಅರಿಜಿತ್‌ ಮಲಾಕರ್‌ ಹೇಳಿದ್ದಾರೆ. ಬಿಎಸ್‌ಇ ಮಿಡ್‌ ಮತ್ತು ಸ್ಮಾಲ್‌ ಕ್ಯಾಪ್‌ ಸೂಚ್ಯಂಕಗಳು ಶೇ 1.68ರವರೆಗೂ ಏರಿಕೆ ಕಂಡವು.

ಕರೆನ್ಸಿ ವಿನಿಯಮ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 19 ಪೈಸೆ ಹೆಚ್ಚಾಗಿದ್ದು ಒಂದು ಡಾಲರ್‌ಗೆ ₹ 74.79ರಂತೆ ವಿನಿಮಯಗೊಂಡಿತು.

ಟೈಟಾನ್‌ ಬಂಡವಾಳ ವೃದ್ಧಿ: ದಿನದ ವಹಿವಾಟಿನಲ್ಲಿ ಟೈಟಾನ್‌ ಕಂಪನಿಯ ಷೇರು ಮೌಲ್ಯವು ಶೇ 11ರಷ್ಟು ಏರಿಕೆ ಆಗಿದ್ದು, ಇದರಿಂದ ಕಂಪನಿಯ ಒಟ್ಟಾರೆ ಬಂಡವಾಳ ಮೌಲ್ಯವು ₹ 2.10 ಲಕ್ಷ ಕೋಟಿಗೆ ಏರಿಕೆ ಕಂಡಿತು.

ಬಿಎಸ್‌ಇನಲ್ಲಿ ಕಂಪನಿಯ ಷೇರು ಮೌಲ್ಯವು ಶೇ 11.69ರಷ್ಟು ಹೆಚ್ಚಾಗಿ ₹ 2,376ಕ್ಕೆ ತಲುಪಿತು. ಎನ್‌ಎಸ್‌ಇನಲ್ಲಿ ಕಂಪನಿ ಷೇರು ಮೌಲ್ಯ ಶೇ 11.01ರಷ್ಟು ಹೆಚ್ಚಾಗಿ 52 ವಾರಗಳ ಗರಿಷ್ಠ ಮಟ್ಟವಾದ ₹ 2,384ಕ್ಕೆ ತಲುಪಿತು.

ಜುಲೈ–ಸೆಪ್ಟೆಂಬರ್‌ ಅವಧಿಯಲ್ಲಿ ಬೇಡಿಕೆಯಲ್ಲಿ ಉತ್ತಮ ಚೇತರಿಕೆ ಕಂಡುಬಂದಿದೆ ಎಂದು ಕಂಪನಿಯು ಬುಧವಾರ ಹೇಳಿಕೆ ನೀಡಿತ್ತು. ಇದರಿಂದಾಗಿ ಷೇರುಗಳ ಮೌಲ್ಯ ಹೆಚ್ಚಳವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT