ಶುಕ್ರವಾರ, ಅಕ್ಟೋಬರ್ 22, 2021
29 °C

ಸೆನ್ಸೆಕ್ಸ್‌ 534 ಅಂಶ ಜಿಗಿತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಇಂಧನ, ಹಣಕಾಸು ಮತ್ತು ಐ.ಟಿ. ವಲಯಗಳ ಷೇರುಮೌಲ್ಯ ಹೆಚ್ಚಳದಿಂದಾಗಿ ದೇಶದ ಷೇರುಪೇಟೆಗಳಲ್ಲಿ ಸೋಮವಾರ ಸಕಾರಾತ್ಮಕ ವಹಿವಾಟು ನಡೆಯಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 534 ಅಂಶ ಏರಿಕೆಯಾಗಿ 59,299 ಅಂಶಗಳಿಗೆ ತಲುಪಿತು. ಬಿಎಸ್‌ಇ ಮಿಡ್‌ ಮತ್ತು ಸ್ಮಾಲ್‌ ಕ್ಯಾಪ್‌ ಸೂಚ್ಯಂಕಗಳು ಶೇಕಡ 1.71ರಷ್ಟು ಏರಿಕೆ ಕಂಡವು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 159 ಅಂಶ ಹೆಚ್ಚಾಗಿ 17,691 ಅಂಶಗಳಿಗೆ ಏರಿಕೆ ಆಯಿತು.

ಆರ್ಥಿಕ ಚಟುವಟಿಕೆಯಲ್ಲಿ ಚೇತರಿಕೆ, ಕೋವಿಡ್‌ನ ಎರಡನೇ ಅಲೆಯು ತೀವ್ರವಾಗಿ ಇಲ್ಲದೇ ಇರುವುದು ಹಾಗೂ ಹಬ್ಬಗಳ ಋತುವಿನ ಬೇಡಿಕೆಯಿಂದಾಗಿ ಕಂಪನಿಗಳ ಎರಡನೇ ತ್ರೈಮಾಸಿಕದ ಗಳಿಕೆಯು ಉತ್ತಮವಾಗಿರುವ ನಿರೀಕ್ಷೆ ಮಾಡಲಾಗಿದೆ. ಹೀಗಾಗಿ, ಜಾಗತಿಕ ಷೇರುಪೇಟೆಗಳ ಪ್ರತಿಕೂಲ ಪರಿಸ್ಥಿತಿಯ ನಡುವೆಯೂ ದೇಶಿ ಷೇರುಪೇಟೆಗಳು ಗಳಿಕೆ ಕಂಡವು ಎಂದು ಜಿಯೋಜಿತ್‌ ಹಣಕಾಸು ಸೇವೆಗಳ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

ಹಣದುಬ್ಬರದ ಆತಂಕ ಮತ್ತು ಚೀನಾದ ಎವರ್‌ಗ್ರಾಂಡೆ ಸಮೂಹದ ಸಾಲದ ಬಿಕ್ಕಟ್ಟಿನಿಂದಾಗಿ ಜಾಗತಿಕ ಷೇರುಪೇಟೆಗಳು ಒತ್ತಡದಲ್ಲಿದ್ದವು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲ ದರ ಶೇ 0.13ರಷ್ಟು ಇಳಿಕೆ ಆಗಿದ್ದು ಬ್ಯಾರಲ್‌ಗೆ 79.38 ಡಾಲರ್‌ಗಳಿಗೆ ತಲುಪಿದೆ. ಕರೆನ್ಸಿ ವಿನಿಯಮ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯವು 19 ಪೈಸೆ ಇಳಿಕೆ ಆಗಿದ್ದು ₹ 74.31ರಂತೆ ವಿನಿಮಯಗೊಂಡಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು