ಮುಂಬೈ: ಹೊಸ ವರ್ಷದ ಮೊದಲ ದಿನ ಅಲ್ಪ ಗಳಿಕೆ ಕಂಡಿದ್ದ ಷೇರುಪೇಟೆಯ ವಹಿವಾಟು ಎರಡನೇ ದಿನವಾದ ಮಂಗಳವಾರ ನಷ್ಟದೊಂದಿಗೆ ಅಂತ್ಯಗೊಂಡಿದೆ.

ಇತ್ತೀಚೆಗೆ ಮಾರುಕಟ್ಟೆಯಲ್ಲಿ ಲಾಭ ಕಂಡಿದ್ದ ಬ್ಯಾಂಕ್, ಆಟೊ ಮತ್ತು ಐ.ಟಿ ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿದ್ದರಿಂದ ಮುಂಬೈ ಷೇರು ಸೂಚ್ಯಂಕ (ಬಿಎಸ್‌ಇ) ಸೆನ್ಸೆಕ್ಸ್ ಕುಸಿತದ ಹಾದಿ ಹಿಡಿಯಿತು.

379 ಅಂಶ ಇಳಿಕೆಯಾಗಿ ಸೆನ್ಸೆಕ್ಸ್ 71,892ರಲ್ಲಿ ಸ್ಥಿರವಾಯಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 76 ಅಂಶ ಕಡಿಮೆಯಾಗಿ, 21,665ಕ್ಕೆ ಅಂತ್ಯಗೊಂಡಿತು.

ಸನ್ ಫಾರ್ಮಾ, ಬಜಾಜ್ ಫೈನಾನ್ಸ್, ಭಾರ್ತಿ ಏರ್‌ಟೆಲ್, ರಿಲಯನ್ಸ್ ಇಂಡಸ್ಟ್ರೀಸ್, ಬಜಾಜ್ ಫಿನ್‌ಸರ್ವ್ ಮತ್ತು ಟೈಟನ್ ಲಾಭ ಕಂಡಿವೆ.

ಮಹೀಂದ್ರ ಆ್ಯಂಡ್ ಮಹೀಂದ್ರ, ಅಲ್ಟ್ರಾಟೆಕ್ ಸಿಮೆಂಟ್, ಕೋಟಕ್ ಬ್ಯಾಂಕ್, ಲಾರ್ಸೆನ್ ಆ್ಯಂಡ್ ಟೊರ್ಬೊ, ಐಸಿಐಸಿಐ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್, ವಿಪ್ರೊ ಮತ್ತು ಹಿಂದೂಸ್ತಾನ್ ಯೂನಿಲಿವರ್ ಷೇರುಗಳು ಇಳಿಕೆ ಕಂಡಿವೆ. ಬಿಎಸ್‌ಇ ಮಿಡ್ ಕ್ಯಾಪ್ ಗೇಜ್ ಮತ್ತು ಸ್ಮಾಲ್‌ಕ್ಯಾಪ್ ಗೇಜ್ ಇಳಿಕೆ ಕಂಡಿವೆ. ಇಂಧನ, ಆರೋಗ್ಯ, ಸೇವೆ ಮತ್ತು ಲೋಹದ ಷೇರುಗಳು ಗಳಿಕೆ ಕಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.