ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವಾ ವಲಯದ ಚಟುವಟಿಕೆ ಕುಸಿತ

Last Updated 3 ಜುಲೈ 2020, 11:04 IST
ಅಕ್ಷರ ಗಾತ್ರ

‌ನವದೆಹಲಿ: ದೇಶದ ಸೇವಾ ವಲಯಗಳ ಚಟುವಟಿಕೆಗಳು ಜೂನ್‌ನಲ್ಲಿಯೂ ಕುಸಿತ ದಾಖಲಿಸಿವೆ.

‘ಕೋವಿಡ್–19’ ಪಿಡುಗಿನಿಂದಾಗಿ ಹೊಸ ಕೆಲಸದ ಆರ್ಡರ್‌ಗಳು ಕಡಿಮೆಯಾಗಿವೆ. ಕೆಲ ಮಟ್ಟಿಗೆ ಸ್ಥಿರತೆ ಕಂಡು ಬಂದರೂ ಅಡಚಣೆ ಮುಂದುವರೆದಿರುವುದನ್ನು ಸೇವಾ ಚಟುವಟಿಕೆಗಳ ಸೂಚ್ಯಂಕದ ಸಮೀಕ್ಷೆ ದೃಢಪಡಿಸಿದೆ.

ಐಎಚ್‌ಎಸ್‌ ಮರ್ಕಿಟ್‌ ಇಂಡಿಯಾ ಸರ್ವಿಸಸ್‌ ಬಿಸಿನೆಸ್‌ ಆ್ಯಕ್ಟಿವಿಟಿ ಇಂಡೆಕ್ಸ್‌ ಜೂನ್‌ನಲ್ಲಿ ಶೇ 33.7ರಷ್ಟು ದಾಖಲಾಗಿದೆ. ಮೇನಲ್ಲಿ ಇದು ಶೇ 12.6ರಷ್ಟಿತ್ತು. ಹಿಂದಿನ ತಿಂಗಳಿಗೆ ಹೋಲಿಸಿದರೆ ಹೆಚ್ಚಳಗೊಂಡಿದ್ದರೂ ಸತತ ನಾಲ್ಕನೇ ತಿಂಗಳೂ ಸೇವಾ ಚಟುವಟಿಕೆಗಳ ಪ್ರಗತಿ ಕುಸಿದಿದೆ. ಸೇವಾ ವಹಿವಾಟು ಚಟುವಟಿಕೆಗಳ ಸೂಚ್ಯಂಕವು 50ಕ್ಕಿಂತ ಹೆಚ್ಚಿಗೆ ಇದ್ದರೆ ಪ್ರಗತಿ ಹಾದಿಯಲ್ಲಿ ಇದೆ. ಅದಕ್ಕಿಂತ ಕಡಿಮೆ ಇದ್ದರೆ ಅದನ್ನು ಐಎಚ್‌ಎಸ್ ಮರ್ಕಿಟ್‌ ಇಂಡಿಯಾ ಸರ್ವಿಸಸ್‌ ಪರ್ಚೇಚಿಂಗ್‌ ಮ್ಯಾನೇಜರ್ಸ್‌ ಇಂಡೆಕ್ಸ್‌ (ಪಿಎಂಐ) ಅನ್ವಯ ಕುಸಿತ ಎಂದು ಪರಿಗಣಿಸಲಾಗುವುದು.

‘ಕೊರೊನಾ ವೈರಾಣು ಬಿಕ್ಕಟ್ಟಿನಿಂದಾಗಿ ಭಾರತದ ಸೇವಾ ವಲಯದ ಚಟುವಟಿಕೆಗಳು ಜೂನ್‌ನಲ್ಲಿಯೂ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ’ ಎಂದು ಐಎಚ್‌ಎಸ್‌ ಮರ್ಕಿಟ್‌ನ ಆರ್ಥಿಕ ತಜ್ಞ ಜೋಯ್‌ ಹೇಯ್ಸ್‌ ಹೇಳಿದ್ದಾರೆ.

ಸಾರಿಗೆ, ಮಾಹಿತಿ, ಸಂಪರ್ಕ, ಹಣಕಾಸು, ವಿಮೆ, ರಿಯಲ್‌ ಎಸ್ಟೇಟ್‌ ಮತ್ತು ವಹಿವಾಟು ಸೇವೆಗಳನ್ನು ಸಮೀಕ್ಷೆಗೆ ಪರಿಗಣಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT