ಗುರುವಾರ , ಜುಲೈ 29, 2021
21 °C

ಸೇವಾ ವಲಯದ ಚಟುವಟಿಕೆ ಮಂದಗತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಲಾಕ್‌ಡೌನ್‌ನಿಂದಾಗಿ ದೇಶದ ಸೇವಾ ವಲಯದ ಚಟುವಟಿಕೆಗಳು ಮೇನಲ್ಲಿಯೂ ಮಂದಗತಿಯಲ್ಲಿಯೇ ಸಾಗಿದೆ.

ಐಎಚ್‌ಎಸ್‌ ಮರ್ಕಿಟ್‌ ಇಂಡಿಯಾ ಸರ್ವೀಸ್‌ ಬಿಸಿನೆಸ್‌ ಆ್ಯಕ್ಟಿವಿಟಿ ಇಂಡೆಕ್ಸ್‌ ಮೇನಲ್ಲಿ 12.6ರಷ್ಟಾಗಿದೆ. ಏಪ್ರಿಲ್‌ನಲ್ಲಿದ್ದ 5.4ಕ್ಕೆ ಹೋಲಿಸಿದರೆ ತುಸು ಚೇತರಿಕೆ ಕಂಡಿದೆಯಾದರೂ ಸೂಚ್ಯಂಕವು 50ರ ಮಟ್ಟದಲ್ಲಿದ್ದರೆ ಸಮಾಧಾನಕರ ಬೆಳವಣಿಗೆ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಸದ್ಯದ ಬೆಳವಣಿಗೆಯು 14 ವರ್ಷಗಳ ಕನಿಷ್ಠ ಮಟ್ಟದಲ್ಲಿಯೇ ಇದೆ.

ಲಾಕ್‌ಡೌನ್‌ನಿಂದಾಗಿ ವಹಿವಾಟುಗಳು ಸ್ಥಗಿತಗೊಂಡಿವೆ. ಬೇಡಿಕೆಯೂ ದುರ್ಬಲವಾಗಿದೆ ಈ ಕಾರಣಕ್ಕಾಗಿ ಕುಸಿತ ಕಂಡಿದೆ. ಇದರಿಂದ ಉದ್ಯೋಗಸೃಷ್ಟಿಯು ಇನ್ನಷ್ಟು ಇಳಿಕೆಯಾಗಲಿದ್ದು, ಆರ್ಥಿಕತೆಗೆ ಹೆಚ್ಚಿನ ಸವಾಲುಗಳನ್ನು ಒಡ್ಡಲಿದೆ ಎಂದು ಐಎಚ್ಎಸ್‌ ಮರ್ಕಿಟ್‌ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು