ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾಕ್ಕೆ ಸೇವೆಗಳ ರಫ್ತು ಹೆಚ್ಚಾಗುವ ನಿರೀಕ್ಷೆ

Last Updated 15 ಏಪ್ರಿಲ್ 2022, 15:14 IST
ಅಕ್ಷರ ಗಾತ್ರ

ನವದೆಹಲಿ: ಆಸ್ತ್ರೇಲಿಯಾಕ್ಕೆ ಸೇವೆಗಳ ರಫ್ತು ವಹಿವಾಟು ಮೌಲ್ಯವು ಮುಂದಿನ ಐದು ವರ್ಷಗಳಲ್ಲಿ ₹ 38 ಸಾವಿರ ಕೋಟಿಗೆ ತಲುಪುವ ನಿರೀಕ್ಷೆ ಮಾಡಲಾಗಿದೆ ಎಂದು ಸೇವೆಗಳ ರಫ್ತು ಉತ್ತೇಜನಾ ಮಂಡಳಿ (ಎಸ್‌ಇಪಿಸಿ) ಶುಕ್ರವಾರ ಹೇಳಿದೆ.

ಈಗ ಸೇವೆಗಳ ರಫ್ತು ವಹಿವಾಟು ಮೌಲ್ಯವು ₹ 14,440 ಕೋಟಿ ಇದೆ. ಇದಕ್ಕೆ ಹೋಲಿಸಿದರೆ ಎರಡು ಪಟ್ಟಿಗೂ ಹೆಚ್ಚು ಏರಿಕೆ ಆಗಲಿದೆ ಮಂಡಳಿಯ ಅಧ್ಯಕ್ಷ ಎಚ್‌. ತಲಾಟಿ ಹೇಳಿದ್ದಾರೆ.

ವ್ಯಾಪಾರ ಒಪ್ಪಂದದಿಂದ ದೂರಸಂಪರ್ಕ, ಕಂಪ್ಯೂಟರ್‌, ಮಾಹಿತಿ, ಪ್ರಯಾಣ, ಸಂಶೋಧನೆ ಮತ್ತು ಅಭಿವೃದ್ಧಿ, ವೃತ್ತಿ ಮತ್ತು ನಿರ್ವಹಣೆ ಸಲಹಾ ಸೇವೆಗಳ ವಲಯಗಳಿಗೆ ಹೆಚ್ಚಿನ ಪ್ರಯೋಜನ ಆಗಲಿದೆ ಎಂದು ತಿಳಿಸಿದ್ದಾರೆ.

‌ಭಾರತ ಮತ್ತು ಆಸ್ಟ್ರೇಲಿಯಾ ಮಧ್ಯೆ ನಡೆದಿರುವ ವ್ಯಾಪಾರ ಒಪ್ಪಂದದಿಂದಾಗಿ ಸೇವೆಗಳ ರಫ್ತು ಈ ಪ್ರಮಾಣದಲ್ಲಿ ಏರಿಕೆ ಆಗುವ ನಿರೀಕ್ಷೆ ಮಾಡಿರುವುದಾಗಿ ಮಂಡಳಿಯು ತಿಳಿಸಿದೆ. ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದಕ್ಕೆ (ಇಸಿಟಿಎ) ಉಭಯ ದೇಶಗಳು ಏಪ್ರಿಲ್ 2ರಂದು ಸಹಿ ಹಾಕಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT