ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಚ್‌ನಲ್ಲಿ ಸೇವಾ ವಲಯದ ಚಟುವಟಿಕೆ ಏರಿಕೆ

Last Updated 6 ಏಪ್ರಿಲ್ 2022, 16:21 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೇಶದ ಸೇವಾ ವಲಯದ ಚಟುವಟಿಕೆಗಳು ಮಾರ್ಚ್‌ನಲ್ಲಿ ಸುಧಾರಣೆ ಕಂಡಿದೆ. ಎಸ್‌ಆ್ಯಂಡ್‌ಪಿ ಗ್ಲೋಬಲ್ ಇಂಡಿಯಾ ಸರ್ವಿಸಸ್ ಪಿಎಂಐ ಸೂಚ್ಯಂಕವು ಮಾರ್ಚ್‌ನಲ್ಲಿ 53.6ಕ್ಕೆ ಏರಿಕೆ ಆಗಿದೆ. ಇದು ಫೆಬ್ರುವರಿಯಲ್ಲಿ 51.8ರಷ್ಟು ಇತ್ತು.

ಇದರಿಂದಾಗಿ ಸೇವಾ ವಲಯವು ಸತತ ಎಂಟು ತಿಂಗಳಿಂದ ಬೆಳವಣಿಗೆಯ ಹಾದಿಯಲ್ಲಿ ಇದ್ದಂತೆ ಆಗಿದೆ. ‘ರಷ್ಯಾ–ಉಕ್ರೇನ್ ಸಮರವು ಪೂರೈಕೆ ವ್ಯವಸ್ಥೆ, ಹಣದುಬ್ಬರದ ಸಮಸ್ಯೆಗಳನ್ನು ಹೆಚ್ಚಿಸಿತು. ಆದರೆ, ಇದು ಮಾರ್ಚ್‌ನಲ್ಲಿ ಸೇವಾ ವಲಯದ ಚೇತರಿಕೆಗೆ ಅಡ್ಡಿಯಾಗಿ ಪರಿಣಮಿಸಲಿಲ್ಲ’ ಎಂದು ಎಸ್‌ಆ್ಯಂಡ್‌ಪಿ ಗ್ಲೋಬಲ್‌ ಸಂಸ್ಥೆಯ ಅರ್ಥಶಾಸ್ತ್ರದ ಸಹಾಯಕ ನಿರ್ದೇಶಕಿ ಪಾಲಿಯಾನಾ ಡಿ ಲಿಮಾ ಹೇಳಿದ್ದಾರೆ.

ಕಂಪನಿಗಳು ತಮ್ಮ ಸೇವೆಗಳ ಮಾರಾಟದಲ್ಲಿ ಈ ವರ್ಷದ ಮಾರ್ಚ್‌ನಲ್ಲಿ ತ್ವರಿತಗತಿಯ ಬೆಳವಣಿಗೆಯನ್ನು ದಾಖಲಿಸಿವೆ. ಆದರೆ, ಹಣದುಬ್ಬರ ಹೆಚ್ಚಳ ಆಗುತ್ತಿರುವ ಕಾರಣ ವಾಣಿಜ್ಯ ವಹಿವಾಟು ನಡೆಸುವ ವಿಶ್ವಾಸದ ಮಟ್ಟವು ಕಡಿಮೆ ಇದೆ.

ದೇಶದ ಸೇವಾ ವಲಯ ಹಾಗೂ ತಯಾರಿಕಾ ವಲಯದ ಚಟುವಟಿಕೆಗಳನ್ನು ಒಟ್ಟಾಗಿ ಹೇಳುವ ಎಸ್‌ಆ್ಯಂಡ್‌ಪಿ ಗ್ಲೋಬಲ್ ಇಂಡಿಯಾ ಕಾಂ‍‍ಪೊಸಿಟ್ ಪಿಎಂಐ ಔಟ್‌ಪುಟ್‌ ಸೂಚ್ಯಂಕವು ಮಾರ್ಚ್‌ನಲ್ಲಿ 54.3ಕ್ಕೆ ತಲುಪಿದೆ. ಇದು ಫೆಬ್ರುವರಿಯಲ್ಲಿ 53.5ರಷ್ಟು ಇತ್ತು. ಸೂಚ್ಯಂಕವು 50ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇದ್ದರೆ ಅದನ್ನು ಬೆಳವಣಿಗೆ ಎಂದು ಪರಿಗಣಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT