ಆರ್‌ಬಿಐ ನೂತನ ಗವರ್ನರ್‌ ಶಕ್ತಿಕಾಂತ ದಾಸ್‌

7

ಆರ್‌ಬಿಐ ನೂತನ ಗವರ್ನರ್‌ ಶಕ್ತಿಕಾಂತ ದಾಸ್‌

Published:
Updated:

ನವದೆಹಲಿ: ಶಕ್ತಿಕಾಂತ ದಾಸ್‌ ಅವರನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ)ನ ನೂತನ ಗವರ್ನರ್‌ ಆಗಿ ಮಂಗಳವಾರ ನೇಮಕ ಮಾಡಲಾಗಿದೆ.   

ಊರ್ಜಿತ್‌ ಪಟೇಲ್‌ ಆರ್‌ಬಿಐ ಗವರ್ನರ್‌ ಸ್ಥಾನಕ್ಕೆ ಸೋಮವಾರ ರಾಜೀನಾಮೆ ನೀಡಿದ್ದರು. 

ಇದನ್ನೂ ಓದಿ: ಕೇಂದ್ರ ಸರ್ಕಾರ Vs ಆರ್‌ಬಿಐ: ನೆಹರು ಕಾಲದಿಂದಲೇ ಇತ್ತು ಈ ಜಟಾಪಟಿ!

2015–2017ರವರೆಗೂ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಶಕ್ತಿಕಾಂತ ದಾಸ್‌ ಆರ್‌ಬಿಐನ 25ನೇ ಗವರ್ನರ್‌ ಆಗಿ ಅಧಿಕಾರ ವಹಿಸಲಿದ್ದಾರೆ. ಪ್ರಸ್ತುತ ದೇಶದ ಹಣಕಾಸು ಆಯೋಗದ ಸದಸ್ಯರಾಗಿರುವ ದಾಸ್‌, ಕಂದಾಯ ಇಲಾಖೆಯಿಂದ ವಿತ್ತ ಸಚಿವಾಲಯದ ಆರ್ಥಿಕ ವ್ಯವಹಾರಗಳ ಜವಾಬ್ದಾರಿ ವಹಿಸಿದರು. 2016ರ ನೋಟು ರದ್ಧತಿಯ ನಂತರದ ಪ್ರಮುಖ ಬೆಳವಣಿಗೆಗಳಲ್ಲಿ ದಾಸ್‌ ಸುದ್ದಿಯಲ್ಲಿದ್ದರು. 

ತಮಿಳುನಾಡು ಕೇಡರ್‌ ನಿವೃತ್ತ ಐಎಎಸ್‌ ಅಧಿಕಾರಿ ಶಕ್ತಿಕಾಂತ‌ ದಾಸ್‌(63) ತಮಿಳುನಾಡು ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳ ಉನ್ನತ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. 

ಇದನ್ನೂ ಓದಿ: ಆರ್‌ಬಿಐ ಗವರ್ನರ್ ಹುದ್ದೆಗೆ ಊರ್ಜಿತ್ ಪಟೇಲ್ ರಾಜೀನಾಮೆ 

ಬರಹ ಇಷ್ಟವಾಯಿತೆ?

 • 10

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !