ಅಹಮದಾಬಾದ್: ಭಾರತೀಯ ರಿಯಲ್ ಎಸ್ಟೇಟ್ ಡೆವಲಪರ್ಗಳ ಒಕ್ಕೂಟದ (CREDAI) ನೂತನ ಅಧ್ಯಕ್ಷರಾಗಿ ಗುಜರಾತ್ನ ಉದ್ಯಮಿ ಶೇಖರ್ ಜಿ. ಪಟೇಲ್ ಆಯ್ಕೆಯಾಗಿದ್ದಾರೆ ಎಂದು ಒಕ್ಕೂಟ ತಿಳಿಸಿದೆ.

ಶೇಖರ್ ಜಿ. ಪಟೇಲ್ ಅವರು ಪ್ರಸ್ತುತ ಅಹಮದಾಬಾದ್ ಮೂಲದ ‘ಗಣೇಶ್ ಹೌಸಿಂಗ್ ಕಾರ್ಪೊರೇಷನ್’ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.

ಪಟೇಲ್ ಅವರ ಅಧಿಕಾರವಧಿ 2027 ರ ಏಪ್ರಿಲ್ವರೆಗೆ ಇರಲಿದೆ ಎಂದು ಒಕ್ಕೂಟ ತನ್ನ ಪ್ರಕಟಣೆಯಲ್ಲಿ ಶುಕ್ರವಾರ ತಿಳಿಸಿದೆ.

ಒಕ್ಕೂಟದ ಪ್ರಸ್ತುತ ಅಧ್ಯಕ್ಷರಾಗಿರುವ ಉದ್ಯಮಿ ಬೋಮನ್ ಇರಾನಿ ಅವರ ಅವಧಿ ಇದೇ ತಿಂಗಳಾಂತ್ಯಕ್ಕೆ ಮುಗಿಯಲಿದೆ. ಬೊಮನ್ ಇರಾನಿ ಅವರು ‘ಕೀಸ್ಟೋನ್ ರಿಯಲೇಟರ್ಸ್’ ಎಂಬ ರಿಯಲ್ ಎಸ್ಟೇಟ್ ಕಂಪನಿಯನ್ನು ಮುನ್ನಡೆಸುತ್ತಾರೆ.

CREDAI 1999 ರಲ್ಲಿ ಸ್ಥಾಪನೆಯಾಗಿದ್ದು, ದೇಶದ 21 ರಾಜ್ಯಗಳ 230 ಪ್ರಮುಖ ನಗರಗಳ ಸುಮಾರು 13 ಸಾವಿರಕ್ಕೂ ಹೆಚ್ಚು ಡೆವಲಪರ್ಗಳನ್ನು ಸದಸ್ಯರನ್ನಾಗಿ ಹೊಂದಿದೆ. ರಿಯಲ್ ಎಸ್ಟೇಟ್ ಕಂಪನಿಗಳ ಅತ್ಯುನ್ನತ ಒಕ್ಕೂಟವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.