ಶುಕ್ರವಾರ, ಡಿಸೆಂಬರ್ 9, 2022
21 °C

ಮೂರು ತಿಂಗಳಲ್ಲಿ 2.5 ಪಟ್ಟು ಮಾರಾಟ ಪ್ರಗತಿ ಸಾಧಿಸಿದ ಶಾಪ್ಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು; ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಇ-ಕಾಮರ್ಸ್ ಪ್ಲಾಟ್ ಫಾರ್ಮ್ ಶಾಪ್ಸಿ, ಈಚೆಗೆ ಮುಕ್ತಾಯವಾದ 9 ನೇ ಬಿಗ್ ಬಿಲಿಯನ್ ಡೇಸ್ (ಟಿಬಿಬಿಡಿ) ಸಂದರ್ಭದಲ್ಲಿ ಎರಡೂವರೆ ಪಟ್ಟಿಗಿಂತಲೂ ಹೆಚ್ಚು ಮಾರಾಟ ಪ್ರಗತಿ ಸಾಧಿಸಿದೆ.

ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಹಬ್ಬದ ಋತುವಿನಲ್ಲಿ ಕಳೆದ ಟಿಬಿಬಿಡಿಗೆ ಹೋಲಿಸಿದರೆ ಶಾಪ್ಸಿಯಲ್ಲಿ ಗ್ರಾಹಕರ ಸಂಖ್ಯೆ 6 ಪಟ್ಟು ಹೆಚ್ಚಳವಾಗಿದೆ. ಇದರಲ್ಲಿ 2 ಮತ್ತು 3 ನೇ ಶ್ರೇಣಿಯ ನಗರಗಳ ಗ್ರಾಹಕರ ಸಂಖ್ಯೆಯೇ ಹೆಚ್ಚಿದೆ. 

ಖರೀದಿ ನಡೆಸಿರುವ ಗ್ರಾಹಕರಲ್ಲಿ ಶೇ 50 ರಷ್ಟು ಗ್ರಾಹಕರು ಮೊದಲ ಬಾರಿಗೆ ಇ-ಕಾಮರ್ಸ್‌ನಲ್ಲಿ ಖರೀದಿ ನಡೆಸಿದ್ದಾರೆ. ಅವರಲ್ಲಿ ಅರ್ಧದಷ್ಟು ಗ್ರಾಹಕರು 3 ನೇ ಶ್ರೇಣಿಯ ಮಾರುಕಟ್ಟೆಗಳಿಗೆ ಸೇರಿದವಾರಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಫ್ಯಾಶನ್ ವಿಭಾಗದ ಉತ್ಪನ್ನಗಳು ಶಾಪ್ಸಿಯಲ್ಲಿ ಅತ್ಯಧಿಕ ಮಾರಾಟ ಕಂಡಿವೆ. ಹೋಂ ಫರ್ನಿಶಿಂಗ್ ಮತ್ತು ಡೆಕೋರ್, ಗೃಹೋಪಯೋಗಿ, ಗ್ರೂಮಿಂಗ್ ಮತ್ತು ಟೆಕ್ ಅಕ್ಸೆಸರಿಗಳು ನಂತರದ ಸ್ಥಾನದಲ್ಲಿವೆ ಎಂದು ಅದು ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.