ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಫ್ರಿಕಾಕ್ಕೆ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಮಲೇರಿಯಾ ಲಸಿಕೆ ರಫ್ತು

Published 20 ಮೇ 2024, 15:32 IST
Last Updated 20 ಮೇ 2024, 15:32 IST
ಅಕ್ಷರ ಗಾತ್ರ

ನವದೆಹಲಿ: ಲಸಿಕೆ ತಯಾರಿಕಾ ಸಂಸ್ಥೆ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ತನ್ನ ಮಲೇರಿಯಾ ಲಸಿಕೆ ‘ಆರ್‌21/ಮ್ಯಾಟ್ರಿಕ್ಸ್‌–ಎಂ’ ಅನ್ನು ಆಫ್ರಿಕಾಕ್ಕೆ ರಫ್ತು ಮಾಡಲು ಆರಂಭಿಸಿದೆ.

ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಮತ್ತು ನೊವಾವ್ಯಾಕ್ಸ್‌ನ ಮ್ಯಾಟ್ರಿಕ್ಸ್-ಎಂ ಸಹಯೋಗದೊಂದಿಗೆ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಎಸ್‌ಐಐ ತಿಳಿಸಿದೆ.

ಆರಂಭಿಕ ಹಂತವಾಗಿ ಸೆಂಟ್ರಲ್‌ ಆಫ್ರಿಕನ್‌ ರಿಪಬ್ಲಿಕ್‌ಗೆ (ಸಿಎಆರ್‌) ಸಾಗಣೆ ಮಾಡಲಾಗಿದೆ. ಇತರೆ ಆಫ್ರಿಕಾದ ದೇಶಗಳಾದ ದಕ್ಷಿಣ ಸುಡಾನ್‌ ಮತ್ತು ಡೆಮಾಕ್ರಟಿಕ್‌ ರಿಪಬ್ಲಿಕ್‌ ಆಫ್‌ ಕಾಂಗೋಗೆ ಮುಂದಿನ ದಿನಗಳಲ್ಲಿ ರಫ್ತು ಮಾಡಲಾಗುವುದು ಎಂದು ತಿಳಿಸಿದೆ. ಒಟ್ಟು 1.63 ಲಕ್ಷ ಡೋಸ್‌ಗಳಲ್ಲಿ 43,200 ಡೋಸ್‌ಗಳನ್ನು ಮಾತ್ರ ಎಸ್‌ಐಐನ ಪುಣೆಯ ಘಟಕದಿಂದ ಸಾಗಣೆ ಮಾಡಲಾಗಿದೆ. 

ಆಫ್ರಿಕಾಕ್ಕೆ ಆರ್‌21/ಮ್ಯಾಟ್ರಿಕ್ಸ್‌–ಎಂ ಮಲೇರಿಯಾ ಲಸಿಕೆ ರವಾನೆಯು ಈ ಮಾರಣಾಂತಿಕ ಕಾಯಿಲೆಯ ವಿರುದ್ಧದ ನಮ್ಮ ಸಾಮೂಹಿಕ ಹೋರಾಟದಲ್ಲಿ ಒಂದು ಮಹತ್ವದ ಮೈಲಿಗಲ್ಲನ್ನು ಸೂಚಿಸುತ್ತದೆ ಎಂದು ಎಸ್‌ಐಐನ ಸಂಶೋಧನೆ ಮತ್ತು ಅಭಿವೃದ್ಧಿಯ ಕಾರ್ಯನಿರ್ವಾಹಕ ನಿರ್ದೇಶಕ ಉಮೇಶ್‌ ಸಾಲಿಗ್ರಾಮ್‌ ತಿಳಿಸಿದ್ದಾರೆ.

ಕಳೆದ ಅಕ್ಟೋಬರ್‌ನಲ್ಲಿ ಲಸಿಕೆಯು ವಿಶ್ವ ಆರೋಗ್ಯ ಸಂಸ್ಥೆಯಿಂದ ಮಕ್ಕಳಿಗೆ ಬಳಸಲು ಅನುಮತಿ ಪಡೆದಿದೆ. ಲಸಿಕೆಯನ್ನು ಸುಲಭವಾಗಿ ಹಾಕಬಹುದಾಗಿದೆ, ಕೈಗೆಟುಕುವ ಬೆಲೆಯಲ್ಲಿದೆ ಎಂದು ಎಸ್‌ಐಐ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT