ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲರಿಗೂ ಸೂರು: ಎಸ್‌ಎಫ್‌ಬಿ ನೆರವು

ಎಲ್ಲರಿಗೂ ಸೂರು ; ‘ಎಸ್‌ಎಫ್‌ಬಿ’ ನೆರವು
Last Updated 25 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಸಣ್ಣ ಹಣಕಾಸು ಬ್ಯಾಂಕುಗಳು (ಎಸ್‌ಎಫ್‌ಬಿ) ಹಣಕಾಸು ಸೇರ್ಪಡೆ ನಿಟ್ಟಿನಲ್ಲಿ ದೃಢ ಹೆಜ್ಜೆ ಇರಿಸಿವೆ. ಕೆಲವು ವರ್ಷಗಳ ಹಿಂದಷ್ಟೇ ಇವು ಕಾರ್ಯಾರಂಭಗೊಂಡಿದ್ದರೂ ಹಿಂದುಳಿದ ಮತ್ತು ಬ್ಯಾಂಕುಗಳ ಸಹಾಯ ಪಡೆಯದ ಗ್ರಾಹಕರಿಗೆ ಹಣಕಾಸು ನೆರವು ನೀಡುತ್ತಿವೆ.

ಬ್ಯಾಂಕ್‌ ಸೇವೆಗಳಿಂದ ವಂಚಿತರಾದ ನಾಗರಿಕರನ್ನು ಪ್ರಮುಖ ವಾಣಿಜ್ಯ ಬ್ಯಾಂಕುಗಳಿಂದ ತಲುಪಲು ಇದುವರೆಗೂ ಸಾಧ್ಯವಾಗಿಲ್ಲ. ದೊಡ್ಡ, ದೊಡ್ಡ ಬ್ಯಾಂಕ್‌ಗಳು ಲಾಭದೆಡೆಗೆ ಹೆಚ್ಚು ಮುಖಮಾಡಿರುವುದೇ ಇದಕ್ಕೆ ಮುಖ್ಯ ಕಾರಣ.ಬ್ಯಾಂಕ್‌ ವ್ಯಾಪ್ತಿಯಲ್ಲಿ ಇಲ್ಲದವರ ಸಂಖ್ಯೆ ಹೆಚ್ಚಿಗೆ ಇರುವುದರತ್ತ ಗಮನ ಹರಿಸಿದ್ದ ‘ಎಸ್‌ಎಫ್‌ಬಿ’ಗಳು, ಈ ಆರ್ಥಿಕ ಅಂತರವನ್ನು ಭರ್ತಿ ಮಾಡಿವೆ.ಈ ಮೂಲಕ ಅವುಗಳೂ ಬೆಳವಣಿಗೆ ಹೊಂದುತ್ತಿವೆ.

ಆರಂಭದಲ್ಲಿ ಕಿರು ಸಾಲಗಳನ್ನಷ್ಟೇ ನೀಡುತ್ತಿದ್ದ ‘ಎಸ್‌ಎಫ್‌ಬಿ’ಗಳು, ಕ್ರಮೇಣ ದೊಡ್ಡ ಬ್ಯಾಂಕುಗಳು ವಹಿವಾಟು ನಡೆಸುವಂತೆಯೇ ತಮ್ಮ ಸೇವೆಯನ್ನು ವಿಸ್ತರಿಸಿಕೊಳ್ಳುತ್ತಿವೆ. ಗ್ರಾಹಕರಿಗೆ ಬಗೆ ಬಗೆಯ ಸೇವೆ ನೀಡುತ್ತ ಅವರಲ್ಲಿ ಬ್ಯಾಂಕಿಂಗ್‌ ಸಾಕ್ಷರತೆ ಹೆಚ್ಚಿಸಿವೆ. ಆರ್ಥಿಕವಾಗಿ ದುರ್ಬಲವಾಗಿರುವ ವರ್ಗ (ಇಡಬ್ಲ್ಯುಎಸ್‌) ಮತ್ತು ಕಡಿಮೆ ಆದಾಯ ಹೊಂದಿರುವ ವರ್ಗಕ್ಕೆ (ಎಲ್‌ಐಜಿ) ಸೇವೆ ನೀಡುತ್ತಿವೆ.

ಎಲ್ಲರಿಗೂ ಸೂರು

ಕೈಗೆಟುಕುವ ದರದಲ್ಲಿ ವಸತಿ ಹೊಂದುವುದು ಎಲ್ಲ ಗ್ರಾಹಕರ ಕನಸು. ‘ಎಲ್ಲರಿಗೂ ಸೂರು’ ಒದಗಿಸಲು ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಆರಂಭಿಸಿದೆ. ಕೇಂದ್ರದ ಆಶಯವನ್ನು ಈಡೇರಿಸಲು ಎಸ್‌ಎಫ್‌ಬಿಗಳು ಸಹಾಯ ಮಾಡುತ್ತಿವೆ. ದೇಶದಲ್ಲಿ 6 ಕೋಟಿಗಳಷ್ಟು ಮನೆಗಳ ಕೊರತೆ ಇದೆ. ಇದರಲ್ಲಿ ಶೇ 70ರಷ್ಟು ಕೊರತೆ ನಗರದ ಹೊರ ವಲಯ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಇದೆ. 2022ಕ್ಕೆ ಎಲ್ಲರೂ ಸೂರು ಕಲ್ಪಿಸಲು ಸಣ್ಣ ಹಣಕಾಸು ಸಂಸ್ಥೆಗಳು ಸರ್ಕಾರಕ್ಕೆ ಅಗತ್ಯ ಸಹಕಾರ ನೀಡುತ್ತಿವೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಬಹುಮುಖ್ಯ ಅಂಶ, ಸಾಲ ಆಧಾರಿತ ಸಬ್ಸಿಡಿ ಯೋಜನೆ (ಸಿಎಲ್‌ಎಸ್‌ಎಸ್‌). ಮನೆ ಖರೀದಿ, ನಿರ್ಮಾಣ, ದುರಸ್ತಿ– ವಿಸ್ತರಣೆ ಸೇರಿದಂತೆ ವಸತಿ ಉದ್ದೇಶಗಳಿಗೆ ಸಬ್ಸಿಡಿ ಬಡ್ಡಿದರದಲ್ಲಿ ಸಾಲಗಳನ್ನು ಇವು ನೀಡುತ್ತವೆ. ಈ ಕ್ರೆಡಿಟ್‌ ಸಬ್ಸಿಡಿ ಕಾರ್ಯಕ್ರಮ ಆರಂಭದಲ್ಲಿಆರ್ಥಿಕವಾಗಿ ದುರ್ಬಲವಾಗಿರುವ ವರ್ಗ (ಇಡಬ್ಲ್ಯುಎಸ್‌) ಮತ್ತು ಕಡಿಮೆ ಆದಾಯ ಹೊಂದಿರುವ ವರ್ಗಕ್ಕೆ (ಎಲ್‌ಐಜಿ) ಸೀಮಿತಗೊಂಡಿತ್ತು. ಇದೀಗ ಮಧ್ಯಮ ಆದಾಯ ವರ್ಗವನ್ನೂ (ಎಂಐಜಿ) ಒಳಗೊಂಡಿದೆ. ಈ ಸಬ್ಸಿಡಿ ಸೌಲಭ್ಯ ಮಾರ್ಚ್‌ 31, 2022ರವರೆಗೆ ಇರುತ್ತದೆ.

ಯಾರಿಗೆ ಸೌಲಭ್ಯ

ಖರೀದಿದಾರನ ವಾರ್ಷಿಕ ಆದಾಯ ಮತ್ತು ಮನೆಯ ಗಾತ್ರವನ್ನು ಪರಿಗಣಿಸಿ ಈ ಯೋಜನೆಯ ಸೌಲಭ್ಯ ಪಡೆಯಬಹುದು. ವಾರ್ಷಿಕ ಆದಾಯ ₹ 3 ಲಕ್ಷಕ್ಕಿಂತ ಕಡಿಮೆ ಇದ್ದರೆ ಮತ್ತು ಮನೆ 30 ಚದರ ಮೀಟರ್‌ಗಿಂತ ಹೆಚ್ಚಿಲ್ಲದೆ ಇದ್ದರೆ ಇಡಬ್ಲ್ಯೂಎಸ್ ವರ್ಗ ಎಂದು, ₹ 3 ರಿಂದ 6 ಲಕ್ಷ ಇದ್ದು, ಮನೆಯ ವಿಸ್ತೀರ್ಣ 60 ಚದರ ಮೀಟರ್‌ ಹೆಚ್ಚಿರದೇ ಇದ್ದರೆ ಎಂಐಜಿ ಎಂದು ಸರ್ಕಾರ ಪರಿಗಣಿಸಿದೆ. ಈ ಎರಡೂ ವರ್ಗದವರಿಗೆ ಶೇ 6.5 ಬಡ್ಡಿದರದಲ್ಲಿಗರಿಷ್ಠ ₹ 6 ಲಕ್ಷ ಸಾಲ ನೀಡಲಾಗುತ್ತದೆ. ಸಾಲ ತೀರುವಳಿ ಅವಧಿ 20 ವರ್ಷವಾಗಿದ್ದು, ಸಬ್ಸಿಡಿ ₹ 2.67 ಲಕ್ಷ ಆಗಿದೆ.

ಕಿರು ಸಾಲಗಳನ್ನು ನೀಡುತ್ತಿದ್ದಸಣ್ಣ ಹಣಕಾಸು ಬ್ಯಾಂಕುಗಳು ಇದೀಗ ಬ್ಯಾಂಕಿಂಗ್ ಮಾದರಿ
ಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ತಲುಪಿಸುವ ಸೇತುವೆಗಳಾಗಿವೆ. ಅದರಲ್ಲೂ ಮುಖ್ಯವಾಗಿಪ್ರಧಾನ ಮಂತ್ರಿ ಆವಾಸ್ ಯೋಜನೆಯ (ನಗರ) ಸೌಲಭ್ಯಗಳನ್ನು ಎಂಐಜಿ ವರ್ಗಕ್ಕೆ ತಲುಪಿಸುವಲ್ಲಿ ಮುಂಚೂಣಿಯಲ್ಲಿ ಇವೆ. ಸಂಪೂರ್ಣವಾಗಿ ಕಾರ್ಯನಿರ್ವಹಿ
ಸುವ ಬ್ಯಾಂಕುಗಳಾಗಿ ಪರಿವರ್ತನೆ ಹೊಂದಿರುವ ಇವು, ಮೊಬೈಲ್ ಬ್ಯಾಂಕಿಂಗ್, ಇಂಟರ್‌ನೆಟ್ ಬ್ಯಾಂಕಿಂಗ್ ಮತ್ತು ಫೋನ್ ಬ್ಯಾಂಕಿಂಗ್‌ನಂತಹ ವ್ಯಾಪಕ ಸೇವೆಗಳನ್ನು ಒದಗಿಸುತ್ತಿವೆ. ಗೃಹ ಸಾಲ ಪಡೆಯುವುದು ಕಷ್ಟಕರ ಎಂದುಕೊಂಡ ಕುಟುಂಬಗಳೂ ಇದೀಗ ಮನೆ ಹೊಂದುವ ಕನಸನ್ನು ನನಸು ಮಾಡಿಕೊಳ್ಳುತ್ತಿವೆ.

(ಲೇಖಕ: ಉಜ್ಜೀವನ್‌ ಸಣ್ಣ ಹಣಕಾಸು ಬ್ಯಾಂಕ್‌ನ ಮುಖ್ಯ ವಹಿವಾಟು ಅಧಿಕಾರಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT