ಎಸ್‌ಎಂಎಲ್‌ ಇಸುಜು ಹೊಸ ಟ್ರಕ್‌

7

ಎಸ್‌ಎಂಎಲ್‌ ಇಸುಜು ಹೊಸ ಟ್ರಕ್‌

Published:
Updated:

ಬೆಂಗಳೂರು: ಎಸ್‌ಎಂಎಲ್‌ ಇಸುಜು ಕಂಪನಿಯು, ದಕ್ಷಿಣ ಭಾರತದ ಮಾರುಕಟ್ಟೆಗೆ ಜಾಗತಿಕ ಸರಣಿಯ ಟ್ರಕ್‌ಗಳನ್ನು ಬಿಡುಗಡೆ ಮಾಡಿದೆ.

‘ಭಾರತದ ಸರಕು ಸಾಗಣೆ ಮತ್ತು ಟ್ರಕ್‌ ಉದ್ಯಮಗಳಲ್ಲಿ ಆಗುತ್ತಿರುವ ಬದಲಾವಣೆಗಳು ಮತ್ತು ಬೇಡಿಕೆಗಳಿಗೆ ಅನುಗುಣವಾಗಿ ಈ ಟ್ರಕ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ’ ಎಂದು ಕಂಪನಿಯ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ನಾವಲ್‌ ಕುಮಾರ್ ಶರ್ಮಾ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕಂಪನಿಯ ಪರಿಣತರು, ಜಪಾನ್‌ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಶೇ 100 ರಷ್ಟು ದೇಶದಲ್ಲಿಯೇ ಸಿದ್ಧಪಡಿಸಿರುವ ವಾಹನ ಇದಾಗಿದೆ

ವಿಶಾಲವಾದ ಕ್ಯಾಬಿನ್‌ ಸ್ಥಳವಕಾಶ, ಹೊಸ ವಿನ್ಯಾಸದ ಹೆಡ್‌ಲ್ಯಾಂಪ್‌ಗಳು, ಮೊಬೈಲ್‌ ಚಾರ್ಜಿಂಗ್‌ಗಾಗಿ ಡ್ಯಾಷ್‌ಬೋರ್ಡ್‌ನಲ್ಲಿ ಯುಎಸ್‌ಬಿ ಪೋರ್ಟ್‌, ಸುಲಭವಾಗಿ ಗೇರ್‌ ಬದಲಾಯಿಸಲು ಹಗುರಾದ ಕ್ಲಚ್‌ ವ್ಯವಸ್ಥೆ ಇದರ ವಿಶೇಷತೆಗಳಾಗಿವೆ. ಜಾಗತಿಕ ಸರಣಿಯಲ್ಲಿ ಸಾಮ್ರಾಟ್‌ ಎಚ್‌ಡಿ 19, ಸರ್ತಾಜ್‌,  ಸೂಪರ್‌ ಟಿಪ್ಪರ್‌, ಟಿಪ್ಪರ್‌ ಸುಪ್ರೀಂ, ಪ್ರೆಸ್ಟೀಜ್‌, ಸರ್ತಾಜ್‌ ಎಚ್‌ಜಿ 72 ಮಾದರಿಗಳಲ್ಲಿ ಲಭ್ಯ ಇವೆ. ಬೆಲೆ ₹ 14 ಲಕ್ಷದಿಂದ ಆರಂಭವಾಗಲಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !