ಬುಧವಾರ, ಜನವರಿ 20, 2021
16 °C

ಅಮೆಜಾನ್‌ ನೌಕರರಿಗೆ ವಿಶೇಷ ಬೋನಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಅಮೆಜಾನ್‌ ಕಂಪನಿಯು ಭಾರತದಲ್ಲಿನ ತನ್ನ ನೌಕರರಿಗೆ ಗರಿಷ್ಠ ₹ 6,300ರವರೆಗೆ ‘ವಿಶೇಷ ಮನ್ನಣೆಯ ಬೋನಸ್‌’ ನೀಡುವುದಾಗಿ ಸೋಮವಾರ ತಿಳಿಸಿದೆ. ಈ ಮಾದರಿಯ ಬೋನಸ್‌ಅನ್ನು ಕಂಪನಿಯು ಇತರ ದೇಶಗಳಲ್ಲೂ ತನ್ನ ನೌಕರರಿಗೆ ನೀಡುತ್ತಿದೆ.

#MakeAmazonPay (ಅಮೆಜಾನ್‌ ಬೆಲೆ ತೆರುವಂತೆ ಮಾಡಿ) ಎಂಬ ಹ್ಯಾಷ್‌ಟ್ಯಾಗ್‌ ಅಡಿ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಅಭಿಯಾನದ ನಡುವೆಯೇ ಅಮೆಜಾನ್‌ ಈ ಘೋಷಣೆ ಮಾಡಿದೆ. ಅಮೆಜಾನ್‌ ಕಂಪನಿಯು ಭಾರಿ ಮೊತ್ತದ ಲಾಭ ಮಾಡಿಕೊಳ್ಳುತ್ತಿದೆ. ಆದರೆ, ಅಷ್ಟು ಲಾಭ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಕಂಪನಿಯ ನೌಕರರು ಹಾಗೂ ಭೂಮಿಯ ಪರಿಸರವು ತೆರುತ್ತಿರುವ ಬೆಲೆ ಬಹಳ ದೊಡ್ಡದು ಎಂದು #MakeAmazonPay ಅಭಿಯಾನ ನಡೆಸುತ್ತಿರುವವರು ಆರೋಪಿಸಿದ್ದಾರೆ. ಈ ಆರೋಪವನ್ನು ಅಮೆಜಾನ್‌ ಅಲ್ಲಗಳೆದಿದೆ.

ಭಾರತದಲ್ಲಿ ಅಕ್ಟೋಬರ್‌ 16ರಿಂದ ನವೆಂಬರ್‌ 13ರವರೆಗೆ ಕಂಪನಿಯ ಪೂರ್ಣಾವಧಿ ನೌಕರರಾಗಿದ್ದವರಿಗೆ ₹ 6,300 ಹಾಗೂ ಅರೆಕಾಲಿಕ ನೌಕರರಾಗಿದ್ದವರಿಗೆ ₹ 3,150 ಬೋನಸ್ ನೀಡಲಾಗುತ್ತದೆ ಎಂದು ಅಮೆಜಾನ್‌ ಕಂಪನಿಯ ಹಿರಿಯ ಅಧಿಕಾರಿ ಡೇವ್ ಕ್ಲಾರ್ಕ್‌ ಅವರು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು