ಬೆಂಗಳೂರು: ಗೋಲಿನ ಮಳೆಗರೆದ ವಿಸೆನ್ ಇನ್ಫೋಟೆಕ್ ತಂಡ, ಇಲ್ಲಿ ನಡೆಯುತ್ತಿರುವ ಟ್ರೂಆಲ್ಟ್ ಬಯೊಎನರ್ಜಿ ಡಿಎಚ್ ಕಪ್–2023 ‘ಫೈವ್ ಎ ಸೈಡ್’ ಕಾರ್ಪೊರೇಟ್ ಫುಟ್‌ಬಾಲ್ ಟೂರ್ನಿಯಲ್ಲಿ ಗೆಲುವು ಸಾಧಿಸಿತು.
ಶನಿವಾರ ನಡೆದ ಪಂದ್ಯದಲ್ಲಿ ವಿಸೆನ್ 11–0 ಗೋಲುಗಳಿಂದ ಟಿಮ್‌ಕೆನ್ ಇಂಡಿಯಾ ಲಿಮಿಟೆಡ್ ತಂಡವನ್ನು ಮಣಿಸಿತು.
ಇನ್ನೊಂದು ಪಂದ್ಯದಲ್ಲಿ ಬಾಷ್ 8–0 ಗೋಲುಗಳಿಂದ ಕಾರ್ಲೆ ಇನ್‌ಫ್ರಾ ವಿರುದ್ಧ ಗೆದ್ದಿತು.
ಇತರ ಪಂದ್ಯಗಳಲ್ಲಿ ಟಿವಿಎಸ್ ಮೋಟರ್ ಕಂಪೆನಿ 5–1 ಗೋಲುಗಳಿಂದ ಜೆನೆಕ್ಸ್ ವಿರುದ್ಧ; ಎಂಯು ಸಿಗ್ಮಾ 1–0 ಗೋಲಿನಿಂದ ಸ್ವಿಸ್ ರೇ ವಿರುದ್ದ ಗೆದ್ದಿತು.
ಐಕ್ವಿಯಾ ಮತ್ತು ಅಡೋಬಿ ನಡುವಣ ಪಂದ್ಯ ಗೋಲುರಹಿತ ಡ್ರಾದಲ್ಲಿ ಕೊನೆಗೊಂಡಿತು.