ಅದಾನಿ ಷೇರು ಏರಿಕೆ
ಅದಾನಿ ಸಮೂಹದ ಎಲ್ಲ ಷೇರಿನ ಮೌಲ್ಯ ಸೋಮವಾರ ಏರಿಕೆ ಕಂಡಿದೆ.
ಅದಾನಿ ಎನರ್ಜಿ ಸಲ್ಯೂಷನ್ಸ್ ಶೇ 8.40, ಎನ್‌ಡಿಟಿವಿ ಶೇ 6.16, ಅದಾನಿ ವಿಲ್ಮರ್ ಶೇ 5.92, ಅದಾನಿ ಪವರ್ ಶೇ 4.99, ಅದಾನಿ ಟೋಟಲ್ ಗ್ಯಾಸ್ ಶೇ 4.81, ಅದಾನಿ ಗ್ರೀನ್ ಎನರ್ಜಿ ಶೇ 2.93, ಅದಾನಿ ಪೋರ್ಟ್ಸ್ ಶೇ 2.56, ಎಸಿಸಿ ಶೇ 2.38, ಅದಾನಿ ಎಂಟರ್‌ಪ್ರೈಸಸ್ ಶೇ 1.80 ಮತ್ತು ಅಂಬುಜಾ ಸಿಮೆಂಟ್ಸ್ ಶೇ 1.49ರಷ್ಟು ಷೇರಿನ ಮೌಲ್ಯ ಏರಿಕೆ ಆಗಿದೆ. ಸಮೂಹದ ಎಲ್ಲ ಕಂಪನಿಗಳ ಒಟ್ಟು ಮಾರುಕಟ್ಟೆ ಮೌಲ್ಯ ₹16.30 ಲಕ್ಷ ಕೋಟಿಗೆ ಮುಟ್ಟಿದೆ.