ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬು ಖರೀದಿ ಕನಿಷ್ಠ ಬೆಲೆ ಯಥಾಸ್ಥಿತಿ

Last Updated 25 ಜುಲೈ 2019, 19:50 IST
ಅಕ್ಷರ ಗಾತ್ರ

ನವದೆಹಲಿ: ಕಾರ್ಖಾನೆಗಳು ಬೆಳೆಗಾರರಿಂದ ಖರೀದಿಸುವ ಕಬ್ಬಿಗೆ ಪ್ರತಿ ಕ್ವಿಂಟಲ್‌ಗೆ ನೀಡುವ ಕನಿಷ್ಠ ಬೆಲೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಕೇಂದ್ರ ಸಚಿವ ಸಂಪುಟ ಸಮಿತಿಯು (ಸಿಸಿಇಎ) ನಿರ್ಧರಿಸಿದೆ.

ಕಬ್ಬಿನ ನ್ಯಾಯೋಚಿತ ಮತ್ತು ಲಾಭದಾಯಕ ಬೆಲೆಯನ್ನು 2019–20ರ ಅಕ್ಟೋಬರ್‌ – ಸೆಪ್ಟೆಂಬರ್‌ ಮಾರುಕಟ್ಟೆ ವರ್ಷಕ್ಕೆ ಪ್ರತಿ ಕ್ವಿಂಟಲ್‌ಗೆ ₹ 275ರಂತೆ ಉಳಿಸಿಕೊಳ್ಳಲಾಗಿದೆ.

ಕಾಪು ದಾಸ್ತಾನು: ಪ್ರಸಕ್ತ ಸಾಲಿನಲ್ಲಿ 40 ಲಕ್ಷ ಟನ್‌ಗಳಷ್ಟು ಸಕ್ಕರೆಯ ಕಾಪು ದಾಸ್ತಾನು ಮಾಡಬೇಕೆಂಬ ಆಹಾರ ಸಚಿವಾಲಯದ
ಪ್ರಸ್ತಾವವನ್ನು ಸಮಿತಿಯುಅನುಮೋದಿಸಿದೆ.

ಸಕ್ಕರೆ ಉತ್ಪಾದನೆ ಹೆಚ್ಚಳಗೊಳ್ಳಲಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಕಬ್ಬು ಬೆಳೆಗಾರರಿಗೆ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿರುವ ₹ 15 ಸಾವಿರ ಕೋಟಿ ಪಾವತಿಗೆ ನೆರವಾಗಲೂ ಸಮಿತಿ ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT