ಮಂಗಳವಾರ, ಸೆಪ್ಟೆಂಬರ್ 24, 2019
29 °C

ದ್ವಿಚಕ್ರ ವಾಹನ ಮಾರಾಟ ಕುಸಿತ: ಸದ್ಯಕ್ಕೆ ಹೂಡಿಕೆ ಇಲ್ಲ ಎಂದ ಸುಜುಕಿ

Published:
Updated:

ನವದೆಹಲಿ: ವಾಹನ ಉದ್ಯಮದ ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ಯಾವುದೇ ರೀತಿಯ ಹೂಡಿಕೆ ಮಾಡದೇ ಇರಲು ಸುಜುಕಿ ಮೋಟರ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ (ಎಸ್‌ಎಂಐಪಿಎಲ್‌) ನಿರ್ಧರಿಸಿದೆ.

‘ದ್ವಿಚಕ್ರ ವಾಹನ ಮಾರಾಟ ಕುಸಿತ ಕಾಣುತ್ತಿದೆ. ಇದರ ಜತೆಗೆ 2020ರ ಏಪ್ರಿಲ್‌ 1ರಿಂದ ಬಿಎಸ್‌–6 ಮಾನದಂಡ ಜಾರಿಗೆ ಬರುತ್ತಿದೆ. ಹೀಗಾಗಿ ಸದ್ಯದ ಮಟ್ಟಿಗೆ ಸಾಮರ್ಥ್ಯ ವೃದ್ಧಿಗಾಗಿ ಹೂಡಿಕೆ ಮಾಡದೇ ಇರಲು ನಿರ್ಧರಿಸಲಾಗಿದೆ’ ಎಂದು ಕಂಪನಿಯ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ದೇವಶಿಶ್‌ ಹಾಂಡಾ ತಿಳಿಸಿದ್ದಾರೆ.

ಇದನ್ನೂ ಓದಿ: ಆರ್ಥಿಕ ಕುಸಿತ: ಅರ್ಧಕ್ಕಿಳಿದ ವಾಹನ ಮಾರಾಟ

ಎಸ್‌ಎಂಐಪಿಎಲ್‌, ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗಿನ ಮಾರಾಟದಲ್ಲಿ ಎರಡಂಕಿ ಪ್ರಗತಿ ಸಾಧಿಸಿ ಏಕೈಕ ಕಂಪನಿಯಾಗಿದೆ.

‘ವಿದ್ಯುತ್‌ ಚಾಲಿತ ದ್ವಿಚಕ್ರ ವಾಹನ ತಯಾರಿಕೆ ಮತ್ತು ಅಳವಡಿಕೆಗೆ ಸಂಬಂಧಿಸಿದಂತೆ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ಹೀಗಾಗಿ ಭಾರತದಲ್ಲಿ ಹೊಸ ತಯಾರಿಕಾ ಘಟಕ ಸ್ಥಾಪಿಸುವ ಕುರಿತು ಮಾತೃಸಂಸ್ಥೆಯಾಗಿರುವ ಸುಜುಕಿ ಮೋಟರ್‌ ಕಾರ್ಪೊರೇಷನ್‌ ಕಾದು ನೋಡುವ ತಂತ್ರ ಅನುಸರಿಸುತ್ತಿದೆ. ಸಾಮರ್ಥ್ಯ ವೃದ್ಧಿ ಮತ್ತು ಹೊಸ ಘಟಕದ ಅಗತ್ಯ ಇದೆ. ಆದರೆ ತಕ್ಷಣಕ್ಕೆ ಯಾವುದೇ ನಿರ್ಧಾರ ಇಲ್ಲ. ಬಿಎಸ್‌–6ಗೆ ಪರಿವರ್ತನೆ ಹೊಂದುವಲ್ಲಿ ಮಾರುಕಟ್ಟೆಯು ಯಾವ ರೀತಿ ಸ್ಪಂದಿಸಲಿದೆ ಎನ್ನುವುದರ ಆಧಾರದ ಮೇಲೆ ಮುಂದಿನ ನಡೆ ಅವಲಂಬಿಸಿರಲಿದೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಆರ್ಥಿಕ ಹಿಂಜರಿತ: ವಾಣಿಜ್ಯ ವಾಹನ ಮಾರಾಟ ಭಾರಿ ಕುಸಿತ

* 10 ಲಕ್ಷ – ಗುರುಗ್ರಾಮದಲ್ಲಿರುವ ಘಟಕದ ವಾರ್ಷಿಕ ಸಾಮರ್ಥ್ಯ

* 8 ಲಕ್ಷ – ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶಿ ಮಾರಾಟದ ನಿರೀಕ್ಷೆ

* 1 ಲಕ್ಷ – ಪ್ರಸಕ್ತ ಹಣಕಾಸು ವರ್ಷದಲ್ಲಿ ರಫ್ತು ನಿರೀಕ್ಷೆ

ಮಾರಾಟ 

* 3,46,018 – 2019–20ರ ಏಪ್ರಿಲ್‌–ಆಗಸ್ಟ್‌

* 2,98,989 – 2018–19ರ ಏಪ್ರಿಲ್‌–ಆಗಸ್ಟ್‌

Post Comments (+)