ಶುಕ್ರವಾರ, ಆಗಸ್ಟ್ 6, 2021
21 °C

ಎಸ್‌ವಿಸಿ ಬ್ಯಾಂಕ್ ಲಾಭ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದೇಶದ ಪ್ರಮುಖ ಸಹಕಾರ ಬ್ಯಾಂಕ್‌ಗಳಲ್ಲಿ ಒಂದಾಗಿರುವ ‘ಎಸ್‌ವಿಸಿ ಸಹಕಾರ ಬ್ಯಾಂಕ್’, ಮಾರ್ಚ್‌ಗೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಒಟ್ಟು ₹ 150.21 ಕೋಟಿ ಲಾಭ ಗಳಿಸಿದೆ. ಹಿಂದಿನ ವರ್ಷ ಬ್ಯಾಂಕ್‌ ಒಟ್ಟು ₹ 142.01 ಕೋಟಿ ಲಾಭ ಗಳಿಸಿತ್ತು.‌

ಮಾರ್ಚ್‌ 31ಕ್ಕೆ ಕೊನೆಗೊಂಡ ವರ್ಷದಲ್ಲಿ ಬ್ಯಾಂಕ್‌ನ ಒಟ್ಟು ವಹಿವಾಟು ₹ 29,659ಕ್ಕೆ ಹೆಚ್ಚಳ ಆಗಿದೆ. ಹಿಂದಿನ ಹಣಕಾಸು ವರ್ಷದಲ್ಲಿ ಒಟ್ಟು ವಹಿವಾಟು ₹ 28,108 ಕೋಟಿ ಆಗಿತ್ತು ಎಂದು ಪ್ರಕಟಣೆ ತಿಳಿಸಿದೆ. ಸವಾಲಿನ ಈ ಸಂದರ್ಭದಲ್ಲಿಯೂ ಬ್ಯಾಂಕ್‌ನ ಒಟ್ಟು ಎನ್‌ಪಿಎ ಪ್ರಮಾಣ ಶೇಕಡ 1.81ರಷ್ಟು ಮಾತ್ರ ಇದೆ ಎಂದು ಕೂಡ ಪ್ರಕಟಣೆಯಲ್ಲಿ ಹೇಳಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು