ನವದೆಹಲಿ: ಸ್ವಿಗ್ಗಿ ಕಂಪನಿಯು ತನ್ನ ಉದ್ಯೋಗಿಗಳಿಗೆ ಎಲ್ಲಿಂದಲಾದರೂ ಕೆಲಸ ಮಾಡುವ ಕಾಯಂ ವ್ಯವಸ್ಥೆಯನ್ನು ಜಾರಿಗೆ ತರುವುದಾಗಿ ಶುಕ್ರವಾರ ಹೇಳಿದೆ.

ಕಾರ್ಪೊರೇಟ್ ವಹಿವಾಟಿಗೆ ಸಂಬಂಧಿತ ಕೆಲಸಗಳು ಮತ್ತು ತಾಂತ್ರಿಕ ಕೆಲಸಗಳ ತಂಡವು ಕಚೇರಿಗೇ ಬಂದು ಕೆಲಸ ಮಾಡಬೇಕು ಎಂಬುದೇನೂ ಇಲ್ಲ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಉದ್ಯೋಗಿಗಳ ನಡುವೆ ವೈಯಕ್ತಿಕ ಬಾಂಧವ್ಯ ಬೆಳೆಯಬೇಕು ಎಂಬ ಉದ್ದೇಶದಿಂದ ಪ್ರತಿ ತ್ರೈಮಾಸಿಕದಲ್ಲಿ ಒಂದು ವಾರ ಕಚೇರಿಯಿಂದ ಕೆಲಸ ಮಾಡಬೇಕು ಎಂದು ಹೇಳಿದೆ.

ಕಳೆದ ಎರಡು ವರ್ಷಗಳಲ್ಲಿ ಮನೆಯಿಂದ ಕೆಲಸ ಮಾಡುವ ಅವಕಾಶ ಕಲ್ಪಿಸಿದ್ದರಿಂದ ಉತ್ಪಾದಕತೆಯಲ್ಲಿ ಹೆಚ್ಚಳ ಆಗಿದೆ. ಹೀಗಾಗಿ ಎಲ್ಲಿಂದಲಾದರೂ ಕೆಲಸ ಮಾಡಲು ಅವಕಾಶ ನೀಡುವಂತೆ ಹಲವು ವ್ಯವಸ್ಥಾಪಕರು ಮತ್ತು ಉದ್ಯೋಗಿಗಳು ಕೋರಿದ್ದರು ಎಂದು ಕಂಪನಿ ತಿಳಿಸಿದೆ.

ಕಂಪನಿಯು ಸದ್ಯ 27 ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳ 487 ನಗರಗಳಲ್ಲಿ ಒಟ್ಟಾರೆ ಐದು ಸಾವಿರ ಕೆಲಸಗಾರರನ್ನು ಹೊಂದಿದೆ.

ಇದನ್ನೂ ಓದಿ:ಯೇ ದೋಸ್ತಿ.. ಜೊಮಾಟೊಗೆ ಸಹಾಯ ಮಾಡಿದ ಸ್ವಿಗ್ಗಿ! ವಿಡಿಯೊ ನೋಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.