ಬುಧವಾರ, ಮೇ 25, 2022
22 °C

ನೆಕ್ಸಾನ್ ಇವಿ ಮ್ಯಾಕ್ಸ್ ಬಿಡುಗಡೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಟಾಟಾ ಮೋಟರ್ಸ್ ಕಂಪನಿಯು ವಿದ್ಯುತ್ ಚಾಲಿತ ‘ನೆಕ್ಸಾನ್ ಇವಿ ಮ್ಯಾಕ್ಸ್’ ವಾಹನವನ್ನು ಬುಧವಾರ ಬಿಡುಗಡೆ ಮಾಡಿದೆ. ಇದರ ಎಕ್ಸ್‌ಷೋರೂಂ ಬೆಲೆಯು ₹ 17.74 ಲಕ್ಷದಿಂದ ₹ 19.24 ಲಕ್ಷದವರೆಗೆ ಇದೆ.

ಇದು ಈಗಾಗಲೇ ಮಾರುಕಟ್ಟೆಯಲ್ಲಿ ಇರುವ ನೆಕ್ಸಾನ್‌ ಇವಿ ವಾಹನಕ್ಕಿಂತ ಶೇಕಡ 33ರಷ್ಟು ಹೆಚ್ಚು ಬ್ಯಾಟರಿ ಸಾಮರ್ಥ್ಯ ಹೊಂದಿದೆ. ಒಂದು ಬಾರಿ ಚಾರ್ಜ್‌ ಮಾಡಿದರೆ 437 ಕಿ.ಮೀ. ದೂರ ಪ್ರಯಾಣಿಸಬಹುದು ಎಂದು ಕಂಪನಿ ಹೇಳಿದೆ.

ನಿಂತ ಸ್ಥಿತಿಯಿಂದ ಪ್ರತಿ ಗಂಟೆಗೆ 100 ಕಿ.ಮೀ. ವೇಗವನ್ನು ತಲುಪಲು ಇದಕ್ಕೆ 9 ಸೆಕೆಂಡುಗಳು ಸಾಕು. ಈ ವಾಹನದಲ್ಲಿ ಸುರಕ್ಷತೆ ಹಾಗೂ ಆರಾಮಕ್ಕೆ ಸಂಬಂಧಿಸಿದ 30 ಹೆಚ್ಚುವರಿ ವೈಶಿಷ್ಟ್ಯಗಳು ಇವೆ. ಫಾಸ್ಟ್‌ ಚಾರ್ಜರ್ ಸೌಲಭ್ಯ ಇದ್ದರೆ ಆರೂವರೆ ಗಂಟೆಯಲ್ಲಿ ವಾಹನವನ್ನು ಚಾರ್ಜ್ ಮಾಡಿಕೊಳ್ಳಬಹುದು.

2020ರಲ್ಲಿ ಇ.ವಿ. ಮಾರುಕಟ್ಟೆ ಪ್ರವೇಶಿಸಿದ ನಂತರದಲ್ಲಿ ಟಾಟಾ ಮೋಟರ್ಸ್ ಕಂಪನಿಯು ಒಟ್ಟು 25 ಸಾವಿರ ಇ.ವಿ.ಗಳನ್ನು ಮಾರಾಟ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು