ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಟಾ ‘ಟಿಗಾರ್‌ ಇವಿ’ ಬಿಡುಗಡೆ: ಬೆಲೆ ₹ 11.99 ಲಕ್ಷದಿಂದ ಆರಂಭ

Last Updated 31 ಆಗಸ್ಟ್ 2021, 11:43 IST
ಅಕ್ಷರ ಗಾತ್ರ

ಬೆಂಗಳೂರು: ಟಾಟಾ ಮೋಟರ್ಸ್‌ ಕಂಪನಿಯು ಜಿಪ್‌ಟ್ರಾನ್ ತಂತ್ರಜ್ಞಾನ ಬಳಸಿರುವ ‘ಟಿಗಾರ್‌ ಇವಿ’ಯನ್ನು ಸೋಮವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರ ಎಕ್ಸ್‌ ಷೊರೂಂ ಬೆಲೆ ₹ 11.99 ಲಕ್ಷದಿಂದ ಆರಂಭವಾಗುತ್ತದೆ.

ಟಿಗಾರ್‌ ಇವಿಯು ಮೂರು ಆವೃತ್ತಿಗಳಲ್ಲಿ ಲಭ್ಯವಿದೆ. ಟಿಗಾರ್‌ ಇವಿ ಎಕ್ಸ್‌ಇ ಬೆಲೆ ₹ 12.49 ಲಕ್ಷ, ಎಕ್ಸ್‌ಎಂ ಬೆಲೆ ₹ 12.99 ಲಕ್ಷ ಹಾಗೂ ಇವಿ ಎಕ್ಸ್‌ಜೆಡ್‌+ ಬೆಲೆ ₹ 12.99 ಲಕ್ಷ (ಡ್ಯುಯಲ್‌ ಟೋನ್‌ ಆಯ್ಕೆಗೆ ₹ 13.14 ಲಕ್ಷ) ಇದೆ.

‘ಪರಿಸರ ಸ್ನೇಹಿ ವಾಹನಗಳಿಗೆ ಆದ್ಯತೆ ಹೆಚ್ಚಾಗುತ್ತಿದೆ. ಇದರಿಂದಾಗಿ ವಿದ್ಯುತ್ ಚಾಲಿತ ವಾಹನಗಳ (ಇವಿ) ಖರೀದಿಗೆ ಇರುವ ಅಡೆತಡೆಗಳನ್ನು ನಿವಾರಿಸಲಾಗುತ್ತಿದೆ. ಇವಿಗಳು ವೇಗವಾಗಿ ಜನಪ್ರಿಯತೆ ಗಳಿಸುತ್ತಿವೆ. ನಮ್ಮ ನೆಕ್ಸಾನ್ ಇವಿ ಇಂದು ಭಾರತೀಯ ಮಾರುಕಟ್ಟೆಯಲ್ಲಿನ ಅತ್ಯಂತ ಜನಪ್ರಿಯ ಇವಿ ಆಗಿದೆ’ ಎಂದು ಟಾಟಾ ಮೋಟರ್ಸ್‌ನ ಪ್ರಯಾಣಿಕ ವಾಹನದ ವಿಭಾಗದ ಅಧ್ಯಕ್ಷ ಶೈಲೇಶ್‌ ಚಂದ್ರ ತಿಳಿಸಿದರು.

‘ದೇಶದಲ್ಲಿ ‘ಇವಿ’ ಬಳಕೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉತ್ತಮ ಬೆಂಬಲ ನೀಡುತ್ತಿವೆ. ಸಬ್ಸಿಡಿ ನೀಡುವುದಲ್ಲದೆ, ಪೂರಕ ವಾತಾವರಣವನ್ನೂ ಕಲ್ಪಿಸುತ್ತಿವೆ. ಇದು ಹೊಸ ವಾಹನಗಳನ್ನು ಗ್ರಾಹಕರಿಗೆ ನೀಡಲು ನಮಗೆ ಸ್ಪೂರ್ತಿ ನೀಡುತ್ತಿದೆ’ ಎಂದರು.

ಹೊಸ ಟಿಗೋರ್ ಇವಿ ಒಂದು ಬಾರಿ ಪೂರ್ತಿಯಾಗಿ ಚಾರ್ಜ್‌ ಆದರೆ 306 ಕಿಲೊ ಮೀಟರ್‌ಗಳ ಸಾಗಬಲ್ಲದು (ಎಆರ್‌ಎಐ ಪ್ರಮಾಣಿತ ಪರೀಕ್ಷಾ ಪರಿಸ್ಥಿತಿಯಲ್ಲಿ). 26 ಕಿಲೊವಾಟ್‌ ಲಿಕ್ವಿಡ್‌ ಕೂಲ್ಡ್‌ ಬ್ಯಾಟರಿ ಪ್ಯಾಕ್‌ ಹೊಂದಿದೆ. 8 ವರ್ಷಗಳ ಮತ್ತು 1.60 ಲಕ್ಷ ಕಿಲೋ ಮೀಟರ್‌ ಬ್ಯಾಟರಿ ಮತ್ತು ಮೋಟರ್‌ ವಾರಂಟಿ ಸಿಗಲಿದೆ ಎಂದು ಕಂಪನಿಯು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT