ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಟಾ ಮೋಟರ್ಸ್‌: ಸಣ್ಣ ಡೀಸೆಲ್‌ ಕಾರ್‌ ತಯಾರಿಕೆ ಸ್ಥಗಿತ?

Last Updated 6 ಮೇ 2019, 18:17 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಪ್ರಮುಖ ಕಾರ್‌ ತಯಾರಿಕಾ ಸಂಸ್ಥೆಯಾಗಿರುವ ಟಾಟಾ ಮೋಟರ್ಸ್‌, ತನ್ನ ಸಣ್ಣ ಡೀಸೆಲ್‌ ಕಾರ್‌ಗಳ ತಯಾರಿಕೆಯನ್ನು ಸ್ಥಗಿತಗೊಳಿಸುವ ಸಾಧ್ಯತೆ ಇದೆ.

ವಾಯು ಮಾಲಿನ್ಯ ನಿಯಂತ್ರಣದ ‘ಭಾರತ್‌–6’ (ಬಿಎಸ್‌–6) ಮಾನದಂಡಗಳು ಜಾರಿಗೆ ಬರಲಿರುವ ಕಾರಣಕ್ಕೆ ಈ ಕಾರ್‌ಗಳ ಖರೀದಿ ಬೆಲೆ ದುಬಾರಿಯಾಗಲಿದೆ. ಇದರಿಂದ ಬೇಡಿಕೆ ತಗ್ಗಲಿದೆ ಎನ್ನುವ ಕಾರಣಕ್ಕೆ ಸಂಸ್ಥೆ ಈ ನಿರ್ಧಾರಕ್ಕೆ ಬಂದಿದೆ ಎಂದು ಹಿರಿಯ ಅಧಿಕಾರಿ
ಯೊಬ್ಬರು ತಿಳಿಸಿದ್ದಾರೆ.

ಟಾಟಾ ಮೋಟರ್ಸ್‌ ಸದ್ಯಕ್ಕೆ ತನ್ನ 1 ಲೀಟರ್‌ ಡೀಸೆಲ್‌ ಎಂಜಿನ್ನಿನ ಟಿಯಾಗೊ, ಕಾಂಪ್ಯಾಕ್ಟ್‌ ಸೆಡಾನ್‌ ಟೈಗೊರ್‌ (1.05 ಲೀಟರ್‌ ಪವರ್‌ಟ್ರೇನ್‌) ಮತ್ತು ಹಳೆ ಮಾದರಿಗಳಾದ 1.3 ಲೀಟರ್‌ ಡೀಸೆಲ್‌ ಎಂಜಿನ್ನಿನ ಬೋಲ್ಟ್‌ ಮತ್ತು ಜೆಸ್ಟ್‌ ಕಾರುಗಳನ್ನು ತಯಾರಿಸುತ್ತಿದೆ.

2020ರ ಏಪ್ರಿಲ್‌ನಿಂದ ಡೀಸೆಲ್‌ ಕಾರ್‌ಗಳ ತಯಾರಿಕೆ ಸ್ಥಗಿತಗೊಳಿಸುವುದಾಗಿ ಮಾರುತಿ ಸುಜುಕಿ ಇಂಡಿಯಾ ಈಗಾಗಲೇ ಪ್ರಕಟಿಸಿದೆ. ಡೀಸೆಲ್‌ ವಾಹನಗಳ ಮಾರಾಟ ನಿಲ್ಲಿಸುವುದಿಲ್ಲ ಎಂದು ಫೋರ್ಡ್‌ ಇಂಡಿಯಾ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT