ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 9 ಲಕ್ಷ ಕೋಟಿ ದಾಟಿದ ಟಿಸಿಎಸ್‌ ಮಾರುಕಟ್ಟೆ ಮೌಲ್ಯ

Last Updated 14 ಸೆಪ್ಟೆಂಬರ್ 2020, 14:04 IST
ಅಕ್ಷರ ಗಾತ್ರ

ನವದೆಹಲಿ: ₹ 9 ಲಕ್ಷ ಕೋಟಿಗಿಂತ ಹೆಚ್ಚಿನ ಮಾರುಕಟ್ಟೆ ಮೌಲ್ಯ ಹೊಂದಿರುವ ಭಾರತದ ಎರಡನೆಯ ಕಂಪನಿಯಾಗಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಹೊರಹೊಮ್ಮಿದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್‌) ಈ ಸಾಧನೆ ತೋರಿದ ಭಾರತದ ಮೊದಲ ಕಂಪನಿ.

ಟಿಸಿಎಸ್‌ನ ಷೇರಿನ ಮೌಲ್ಯವು ಶೇಕಡ 5ರಷ್ಟು ಹೆಚ್ಚಳ ಕಂಡು, ಮುಂಬೈ ಷೇರು ಮಾರುಕಟ್ಟೆಯಲ್ಲಿ (ಬಿಎಸ್‌ಇ) ₹ 2,492.30ಗೆ ತಲುಪಿತು. ಒಂದು ಹಂತದಲ್ಲಿ ಟಿಸಿಎಸ್‌ ಷೇರಿನ ಬೆಲೆಯು ₹ 2,504ಕ್ಕೂ ತಲುಪಿತ್ತು. ಎನ್‌ಎಸ್‌ಇಯಲ್ಲಿ ಕಂಪನಿಯ ಷೇರಿನ ಬೆಲೆಯು ₹ 2,489.20ಕ್ಕೆ ತಲುಪಿತು.

ಷೇರು ಮೌಲ್ಯದಲ್ಲಿನ ಹೆಚ್ಚಳದ ಪರಿಣಾಮವಾಗಿ ಟಿಸಿಎಸ್‌ನ ಮಾರುಕಟ್ಟೆ ಮೌಲ್ಯದಲ್ಲಿ ₹ 44,503 ಕೋಟಿಯಷ್ಟು ಹೆಚ್ಚಳ ಆಯಿತು. ಇದರಿಂದಾಗಿ ಕಂಪನಿಯ ಒಟ್ಟು ಮಾರುಕಟ್ಟೆ ಮೌಲ್ಯವು ದಿನದ ಅಂತ್ಯದ ಹೊತ್ತಿಗೆ ₹ 9.35 ಲಕ್ಷ ಕೋಟಿ ತಲುಪಿತು.

ಅತಿ ಹೆಚ್ಚಿನ ಮಾರುಕಟ್ಟೆ ಮೌಲ್ಯ ಹೊಂದಿರುವ ಭಾರತದ ಮುಂಚೂಣಿ ಕಂಪನಿ ಆರ್‌ಐಎಲ್‌. ಇದರ ಈಗಿನ ಮಾರುಕಟ್ಟೆ ಮೌಲ್ಯವು ₹ 15.56 ಲಕ್ಷ ಕೋಟಿ. ಈ ವರ್ಷದಲ್ಲಿ ಇದುವರೆಗೆ ಟಿಸಿಎಸ್‌ ಷೇರುಗಳ ಮೌಲ್ಯದಲ್ಲಿ ಶೇ 15.31ರಷ್ಟು ಹೆಚ್ಚಳ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT