ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗಿಗಳ ವೇತನ ಹೆಚ್ಚಿಸಲಿದೆ ಟಿಸಿಎಸ್‌

Last Updated 19 ಮಾರ್ಚ್ 2021, 16:35 IST
ಅಕ್ಷರ ಗಾತ್ರ

ನವದೆಹಲಿ: 2021–22ನೇ ಆರ್ಥಿಕ ವರ್ಷಕ್ಕೆ ಅನ್ವಯವಾಗುವಂತೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯು ತನ್ನ ನೌಕರರ ವೇತನ ಹೆಚ್ಚಿಸಲಿದೆ. ಇದರಿಂದಾಗಿ ಕಂಪನಿಯ 4.7 ಲಕ್ಷ ಉದ್ಯೋಗಿಗಳಿಗೆ ಪ್ರಯೋಜನ ಆಗಲಿದೆ.

ಆರು ತಿಂಗಳ ಅವಧಿಯಲ್ಲಿ ಟಿಸಿಎಸ್‌ ತನ್ನ ನೌಕರರ ವೇತನ ಹೆಚ್ಚಿಸುತ್ತಿರುವುದು ಇದು ಎರಡನೆಯ ಬಾರಿ. ವೇತನ ಹೆಚ್ಚಳವು ಏಪ್ರಿಲ್‌ನಿಂದ ಅನ್ವಯ ಆಗಲಿದೆ ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ.

‘ಈ ಕಷ್ಟಕಾಲದಲ್ಲಿ ಹೊಂದಿಕೊಳ್ಳುವ ಮನೋಭಾವ, ಹೊಸತನ್ನು ಹುಡುಕುವ ಬಯಕೆ ತೋರಿದ ನಮ್ಮೆಲ್ಲ ಸಹಭಾಗಿಗಳಿಗೆ ಕೃತಜ್ಞರಾಗಿದ್ದೇವೆ. ನಮ್ಮ ಸಹಭಾಗಿಗಳ ಬಗ್ಗೆ ನಾವು ಹೊಂದಿರುವ ಬದ್ಧತೆಯ ದ್ಯೋತಕ ವೇತನದಲ್ಲಿನ ಹೆಚ್ಚಳ’ ಎಂದು ವಕ್ತಾರರು ಹೇಳಿದ್ದಾರೆ.

ಈಗ ಆಗಲಿರುವ ವೇತನ ಹೆಚ್ಚಳವನ್ನು ಪರಿಗಣಿಸಿದರೆ, ಟಿಸಿಎಸ್‌ ಉದ್ಯೋಗಿಗಳ ವೇತನವು ಆರು ತಿಂಗಳ ಅವಧಿಯಲ್ಲಿ ಸರಾಸರಿ ಶೇ 12–14ರಷ್ಟು ಹೆಚ್ಚಳ ಕಂಡಂತೆ ಆಗುತ್ತದೆ ಎಂದು ಮೂಲಗಳು ಹೇಳಿವೆ.

2021ನೆಯ ಹಣಕಾಸು ವರ್ಷದಲ್ಲಿ ವೇತನ ಹೆಚ್ಚಳದ ಘೋಷಣೆಯನ್ನುಮೊದಲು ಮಾಡಿದ ಐ.ಟಿ. ಸೇವಾ ಕಂಪನಿ ಟಿಸಿಎಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT