ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಲಿಪ್‌ಕಾರ್ಟ್‌ನ ₹ 2,060 ಕೋಟಿ ಮೌಲ್ಯದ ಷೇರು ಖರೀದಿಸಿದ ಟೆನ್ಸೆಂಟ್‌

Last Updated 12 ಜೂನ್ 2022, 14:28 IST
ಅಕ್ಷರ ಗಾತ್ರ

ನವದೆಹಲಿ: ಚೀನಾದ ಟೆನ್ಸೆಂಟ್‌ ಕಂಪನಿಯು ಫ್ಲಿಪ್‌ಕಾರ್ಟ್‌ನ ₹ 2,060 ಕೋಟಿ ಮೌಲ್ಯದ ಷೇರುಗಳನ್ನು ಅದರ ಸಹ ಸ್ಥಾಪಕ ಬಿನ್ನಿ ಬನ್ಸಲ್‌ ಅವರಿಂದ ಖರೀದಿಸಿದೆ.

ಟೆನ್ಸೆಂಟ್‌ ಕ್ಲೌಡ್‌ ಯುರೋಪ್‌ ಬಿವಿ ಕಂಪನಿಗೆ ಷೇರುಗಳನ್ನು ಮಾರಾಟ ಮಾಡಿದ ಬಳಿಕ ಫ್ಲಿಪ್‌ಕಾರ್ಟ್‌ನಲ್ಲಿ ಬನ್ಸಲ್‌ ಹೊಂದಿರುವ ಷೇರುಪಾಲು ಶೇ 1.84ರಷ್ಟು ಆಗಿದೆ ಎನ್ನುವ ಮಾಹಿತಿ ಅಧಿಕೃತ ದಾಖಲೆಗಳಲ್ಲಿ ಇದೆ.

ಈ ಕುರಿತು ಕಳುಹಿಸಿದ ಇ–ಮೇಲ್‌ಗೆ ಫ್ಲಿಪ್‌ಕಾರ್ಟ್‌ ಮತ್ತು ಬನ್ಸಲ್‌ ಅವರಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.

ಸಿಂಗಪುರದಲ್ಲಿ ಕೇಂದ್ರ ಕಚೇರಿ ಹೊಂದಿರುವ ಫ್ಲಿಪ್‌ಕಾರ್ಟ್‌, ಭಾರತದಲ್ಲಿ ಮಾತ್ರವೇ ಕಾರ್ಯಾಚರಿಸುತ್ತಿದೆ. ಖರೀದಿ ಪ್ರಕ್ರಿಯೆಯು 2021ರ ಅಕ್ಟೋಬರ್‌ 26ರಂದೇ ಪೂರ್ಣಗೊಂಡಿದ್ದು, ಪ್ರಸಕ್ತ ಹಣಕಾಸು ವರ್ಷದ ಆರಂಭದಲ್ಲಿ ಸರ್ಕಾರದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.

‘ಖರೀದಿ ವಹಿವಾಟು ಸಿಂಗಪುರದಲ್ಲಿ ನಡೆದಿದೆ. ಆದರೆ ಫ್ಲಿಪ್‌ಕಾರ್ಟ್ ಜವಾಬ್ದಾರಿಯುತ ಕಂಪನಿಯಾಗಿ ಅದರ ಬಗ್ಗೆ ಭಾರತೀಯ ಅಧಿಕಾರಿಗಳಿಗೆ ಮಾಹಿತಿ ನೀಡಿದೆ’ ಎಂದು ಮೂಲಗಳು ಹೇಳಿವೆ. ಭಾರತದ ಜೊತೆ ಗಡಿಗಳನ್ನು ಹಂಚಿಕೊಂಡಿರುವ ದೇಶಗಳ ಹೂಡಿಕೆದಾರರು ಭಾರತದ ಕಂಪನಿಗಳನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳುವುದನ್ನು ತಪ್ಪಿಸಲು ಸರ್ಕಾರವು ಎಫ್‌ಡಿಐ ನಿಯಮ ಬಿಗಿಗೊಳಿಸಿದೆ. ಆದರೆ ಈ ವಹಿವಾಟು ಈ ನಿಯಮದ ಅಡಿ ಬರುವುದಿಲ್ಲ ಎಂದು ಮೂಲಗಳು ವಿವರಿಸಿವೆ.

ಭಾರತದಲ್ಲಿ ಕಾರ್ಯಾಚರಿಸುತ್ತಿರುವ ಹಲವು ಕಂಪನಿಗಳಲ್ಲಿ ಟೆನ್ಸೆಂಟ್‌ ಕಂಪನಿಯು ಹೂಡಿಕೆ ಮಾಡಿದೆ. ಟೆನ್ಸೆಂಟ್‌ ಸಮೂಹದ ಪಬ್‌ಜಿ ಮೊಬೈಲ್‌, ಪಬ್ಜಿ ಮೊಬೈಲ್‌ ಲೈಟ್‌ ಸೇರಿದಂತೆ ಹಲವು ಗೇಮಿಂಗ್‌ ಆ್ಯಪ್‌ಗಳಿಗೆ ಸರ್ಕಾರವು ನಿಷೇಧ ಹೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT