ಮೊದಲ ದಿನವೇ ಭಾರ್ತಿ ಏರ್‌ಟೆಲ್ ರಿಲಯನ್ಸ್ ಜಿಯೊ ಹಾಗೂ ವೊಡಾಫೋನ್ ಐಡಿಯಾ ಕಂಪನಿಯು ಬಿಡ್ ಸಲ್ಲಿಕೆ ಮಾಡಿವೆ ಎಂದು ಮೂಲಗಳು ತಿಳಿಸಿವೆ. ಈ ಕಂಪನಿಗಳು ಹರಾಜು ಪ್ರಕ್ರಿಯೆಯ ನಾಲ್ಕನೇ ಸುತ್ತಿನಲ್ಲಿ 900 ಮೆಗಾ ಹರ್ಟ್ಜ್ 1800 ಮೆಗಾ ಹರ್ಟ್ಜ್ 2100 ಮೆಗಾ ಹರ್ಟ್ಜ್ ಹಾಗೂ 2500 ಮೆಗಾ ಹರ್ಟ್ಜ್ ಬ್ಯಾಂಡ್‌ಗಳಲ್ಲಿನ ತರಂಗಾಂತರ ಖರೀದಿಗೆ ಹೆಚ್ಚು ಆಸಕ್ತಿ ತೋರಿವೆ ಎಂದು ಆ ಮೂಲಗಳು ಹೇಳಿವೆ.