ನವದೆಹಲಿ: ಭಾರತದಲ್ಲಿ ಟೆಸ್ಲಾ ಕಾರುಗಳ ಮಾರಾಟ ಮತ್ತು ಸೇವೆಗಳಿಗೆ ಅವಕಾಶ ನೀಡದ ಹೊರತು ದೇಶದಲ್ಲಿ ತನ್ನ ಉತ್ಪನ್ನಗಳನ್ನು ತಯಾರು ಮಾಡುವುದಿಲ್ಲ ಎಂದು ಕಂಪನಿಯ ಸಿಇಒ ಇಲಾನ್ ಮಸ್ಕ್ ಸ್ಪಷ್ಟಪಡಿಸಿದ್ದಾರೆ.

ಭಾರತದಲ್ಲಿ ತಯಾರಿಕಾ ಘಟಕ ಸ್ಥಾಪಿಸುವ ಕುರಿತು ಟ್ವಿಟರ್ ಬಳಕೆದಾರರೊಬ್ಬರು ಕೇಳಿದ ಪ್ರಶ್ನೆಗೆ ಮಸ್ಕ್ ಈ ಪ್ರತಿಕ್ರಿಯೆ ನೀಡಿದ್ದಾರೆ.

ಭಾರತದಲ್ಲಿ ವಿದ್ಯುತ್ ಚಾಲಿತ ವಾಹನಗಳನ್ನು ತಯಾರು ಮಾಡಲು ಟೆಸ್ಲಾ ಕಂಪನಿಯು ಸಿದ್ಧವಿದ್ದರೆ ಅದರಿಂದ ಯಾವುದೇ ಸಮಸ್ಯೆ ಇಲ್ಲ. ಆದರೆ, ಕಂಪನಿಯು ಚೀನಾದಿಂದ ಕಾರನ್ನು ಆಮದು ಮಾಡಿಕೊಳ್ಳಬಾರದು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಕಳೆದ ತಿಂಗಳು ಹೇಳಿದ್ದರು.

ಭಾರತದಲ್ಲಿ ಆಮದು ಮಾಡಿಕೊಂಡ ಕಾರುಗಳ ಮಾರಾಟದಲ್ಲಿ ಕಂಪನಿ ಯಶಸ್ಸು ಸಾಧಿಸಿದ ಬಳಿಕ ತಯಾರಿಕಾ ಘಟಕ ಸ್ಥಾಪಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ಮಸ್ಕ್ ಅವರು 2021ರ ಆಗಸ್ಟ್ನಲ್ಲಿ ಹೇಳಿದ್ದರು. ಭಾರತದಲ್ಲಿ ಕಾರುಗಳನ್ನು ಬಿಡುಗಡೆ ಮಾಡಲು ಕಂಪನಿ ಬಯಸುತ್ತದೆ. ಆದರೆ, ಇಲ್ಲಿ ಆಮದು ಸುಂಕ ಗರಿಷ್ಠ ಮಟ್ಟದಲ್ಲಿ ಇರುವುದೇ ಸಮಸ್ಯೆ ಆಗಿದೆ ಎಂದು ಅವರು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.